ಉಗ್ರನನ್ನು ಬಿಡಲು ಪತ್ನಿ ಮನವಿ

August 24, 2020

ನವದೆಹಲಿ ಆ.24 : ಸ್ಫೋಟಕ ತುಂಬಿಕೊಂಡು ದೆಹಲಿಯ ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳು ಇಸಿಸ್ ಉಗ್ರ ಅಬು ಯೂಸೂಫ್ ಎಂಬಾತನನ್ನು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಸೂಫ್ ಪತ್ನಿ ನನಗೆ ನಾಲ್ಕು ಮಕ್ಕಳಿದ್ದಾರೆ ನನ್ನ ಗಂಡನನ್ನು ಬಿಟ್ಟುಬಿಡಿ ಎಂದು ಮನವಿ ಮಾಡಿದ್ದಾರೆ.
ನನ್ನ ಗಂಡನಿಗೆ ಇದನ್ನೆಲ್ಲಾ ಬಿಟ್ಟುಬಿಡಿ ಎಂದು ಹೇಳಿದ್ದ ಅದಕ್ಕೆ ಆತ ನಿನ್ನ ಪಾಡಿಗೆ ನೀನು ಸುಮ್ಮನಿರು ಎಂದು ಹೇಳಿದ್ದ. ಆತ ನನ್ನ ಮಾತನ್ನು ಕೇಳಿಲ್ಲ. ಪ್ಲೀಸ್ ಆತನನ್ನು ಕ್ಷಮಿಸಿ ಬಿಟ್ಟು ಬಿಡಿ ಎಂದು ಯೂಸೂಫ್ ಪತ್ನಿ ಮನವಿ ಮಾಡಿದ್ದಾಳೆ.
ಅಷ್ಟೇ ಅಲ್ಲದೆ ಯೂಸೂಫ್ ಪತ್ನಿ ಮನೆಯಲ್ಲಿ ಗನ್ ಪೌಡರ್ ಹಾಗೂ ಇತರೆ ಸ್ಫೋಟಕ ವಸ್ತುಗಳು ಇವೆ ಎಂದು ಹೇಳಿದ್ದಾರೆ. ಇದು ಈ ಹೇಳಿಕೆ ಸಂಚಲನ ಮೂಡಿಸಿದೆ.
ಉಗ್ರ ಅಬು ಯೂಸೂಫ್ ನನ್ನು ದೆಹಲಿಯ ದೌಲಾ ಕುಂವಾ ಏರಿಯಾದಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿ ಆತನನ್ನು ಬಂಧಿಸಿತ್ತು. ಆತನ ಬಳಿ ಐಇಡಿ, ಜೊತೆಗೆ ಪಿಸ್ತೂಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.

error: Content is protected !!