ಮಕ್ಕಳಿಗೂ ಮಾಸ್ಕ್ ಕಡ್ಡಾಯ

24/08/2020

ಜಿನೆವಾ ಆ.24 : ವಿಶ್ವದ ಎಲ್ಲಾ ದೇಶಗಳ 12 ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟ ವಯಸ್ಸಿನ ಮಕ್ಕಳು ತಮ್ಮ ಪೋಷಕರ ನೆರವಿನಿಂದ ಮಾಸ್ಕ್‍ಗಳನ್ನು ಕಡ್ಡಾಯವಾಗಿ ಧರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಜಗತ್ತಿನ 213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಮಾರ್ಗಸೂಚಿ ಬಿಡುಗಡೆ ಮಾಡಿರುವ ವಿಶ್ವ ಆರೋಗ್ಯ ಸಂಸ್ಥೆ ಈ ಹಿಂದಿನ ನಿಯಮಗಳ ಜೊತೆ ಇದೀಗ ಹೊಸ ನಿಯಮವೊಂದನ್ನು ಸೇರಿಸಿದೆ. ಅದರಂತೆ ವಿಶ್ವದ ಎಲ್ಲಾ ದೇಶಗಳ 12 ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟ ವಯಸ್ಸಿನ ಮಕ್ಕಳು ತಮ್ಮ ಪೋಷಕರ ನೆರವಿನಿಂದ ಮಾಸ್ಕ್‍ಗಳನ್ನು ಕಡ್ಡಾಯವಾಗಿ ಧರಿಸಬೇಕು.
ಮಕ್ಕಳು ಸೋಂಕನ್ನು ಹೇಗೆ ಹರಡಿಸುತ್ತಾರೆ ಎಂಬುದರ ಕುರಿತು ಸ್ಪಷ್ಟ ಮಾಹಿತಿಯಿಲ್ಲವಾದರೂ, ಅಪ್ರಾಪ್ತರು ಇತರ ವಯಸ್ಕರಂತೆಯೇ ಸೋಂಕು ಹರಡಿಸಬಲ್ಲರು ಎಂದು Wಊಔ ಹೇಳಿದೆ. ಐದು ವರ್ಷ ಮತ್ತು ಅದಕ್ಕಿಂತ ಸಣ್ಣ ವಯಸ್ಸಿನ ಮಕ್ಕಳು ಮಾಸ್ಕ್ ಧರಿಸಬೇಕಿಲ್ಲ ಎಂದು ಅದು ಹೇಳಿದೆ.