ರಾಷ್ಟ್ರಪಕ್ಷಿಯೊಂದಿಗೆ ಪ್ರಧಾನಿ ಮೋದಿ
24/08/2020

ನವದೆಹಲಿ ಆ.24 : ಪ್ರಧಾನಿ ನರೇಂದ್ರ ಮೋದಿ ಪ್ರಕೃತಿ ಪ್ರಿಯರಾಗಿದ್ದು, ಹಲವು ಸಂದರ್ಭಗಳಲ್ಲಿ ಇದು ಬಹಿರಂಗಗೊಂಡಿದೆ. ಆದರೆ ನವಿಲುಗಳೊಂದಿಗಿನ ಅವರ ಸಂವಹನವನ್ನು ಸೆರೆ ಹಿಡಿದಿರುವ ಇತ್ತೀಚಿನ ವೀಡಿಯೊ ಬಹುತೇಕ ಜನರ ಹೃದಯ ಗೆದ್ದಿದೆ.
ಮೋದಿ ಅವರು ಭಾನುವಾರ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ 1.47 ನಿಮಿಷಗಳ ತುಣುಕನ್ನು ಹೊಂದಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ, ಇದರಲ್ಲಿ ಅವರು ಗಂಡು ಹಾಗೂ ಹೆಣ್ಣು ನವಿಲುಗಳಿಗೆ ಆಹಾರ ನೀಡುವ ದೃಶ್ಯವಿದೆ. ಪ್ರಧಾನಿ ಮೋದಿ ಹಿಡಿದಿದ್ದ ತಟ್ಟೆಯಿಂದ ರಾಷ್ಟ್ರಪಕ್ಷಿ ಧಾನ್ಯವನ್ನು ಹೆಕ್ಕಿ ತಿನ್ನುತ್ತಿದೆ.
ಈ ವಿಡಿಯೋ ಪ್ರಧಾನ ಮಂತ್ರಿಯವರ 7, ಲೋಕ ಕಲ್ಯಾಣ್ ಮಾರ್ಗ ನಿವಾಸದಿಂದ ಬಂದಿದೆ. ನಂತರ ನವಿಲು ಪ್ರಧಾನಿಯವರ ಎದುರು ಉತ್ಸಾಹದಿಂದ ಗರಿಗೆದರಿ, ನಲಿಯುವ ದೃಶ್ಯವೂ ಇದೆ. ಮೋದಿ ಅವರು ಇನ್ಸ್ಟಾಗ್ರಾಮ್ನಲ್ಲಿ ತಮ್ಮ 45 ಮಿಲಿಯನ್ ಅನುಯಾಯಿಗಳೊಂದಿಗೆ ಐಡಿಲಿಕ್ ದೃಶ್ಯಕಲಾವ್ಯವನ್ನು ಹಂಚಿಕೊಂಡಿದ್ದಾರೆ. ಅಲ್ಪಾವಧಿಯಲ್ಲಿಯೇ, ಒಂದು ಲಕ್ಷಕ್ಕೂ ಹೆಚ್ಚು ಜನರು ವೀಡಿಯೊವನ್ನು ವೀಕ್ಷಿಸಿದ್ದಾರೆ.
