ಟ್ರಂಪ್ ಪರ ಮೋದಿ ಭಾವಚಿತ್ರ

24/08/2020

ವಾಷಿಂಗ್ ಟನ್ ಆ.24 : ನವೆಂಬರ್ ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ವೇದಿಕೆ ಸಿದ್ಧಗೊಂಡಿದ್ದು, ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಡೊನಾಲ್ಡ್ ಟ್ರಂಪ್, ಭಾರತೀಯರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸ್ನೇಹವನ್ನೇ ಟ್ರಂಪ್ ಕಾರ್ಡ್ ಆಗಿ ಬಳಕೆ ಮಾಡಲು ಮುಂದಾಗಿದ್ದಾರೆ. ಜಾಹೀರಾತುಗಳಲ್ಲಿ ಮೋದಿಯವರ ಭಾವಚಿತ್ರವನ್ನು ಬಳಸಿಕೊಳ್ಳುತ್ತಿದ್ದಾರೆ.
ಈಗಾಗಲೇ ಡೆಮಾಕ್ರೆಟಿಕ್ ಪಕ್ಷದಿಂದ ಜೋಯ್ ಬಿಡೇನ್ ಅಧ್ಯಕ್ಷೀಯ ಚುನಾವಣೆಯ ಅಖಾಡಕ್ಕೆ ಧುಮುಕಿದ್ದರೆ, ರಿಪಬ್ಲಿಕನ್ ಪಕ್ಷದಿಂದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡನೇ ಅವಧಿಗೆ ಆಯ್ಕೆಯನ್ನು ಬಯಸಿ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ.
ಎರಡೂ ಪಕ್ಷಗಳು ಅಮೆರಿಕಾದಲ್ಲಿರುವ ಭಾರತೀಯರ ಮತಗಳನ್ನು ಸೆಳೆಯುವುದಕ್ಕೆ ಹರಸಾಹಸ ಮಾಡುತ್ತಿವೆ. ಡೆಮಾಕ್ರೆಟಿಕ್ ಪಕ್ಷ ಭಾರತೀಯ ಮತಗಳನ್ನು ಸೆಳೆಯುವುದಕ್ಕಾಗಿ ಭಾರತೀಯ ಮೂಲವನ್ನು ಹೊಂದಿರುವ ಕಮಲಾ ಹ್ಯಾರಿಸ್ ಅವರನ್ನು ಉಪಾಧ್ಯಕ್ಷ ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾರೆ.