ನಿಧನರಾದ ಟಿಟ್ಟು ಹಾಗೂ ಅಬೂಬಕ್ಕರ್ ಅವರ ಮನೆಗೆ ಜಿಲ್ಲಾ ಕಾಂಗ್ರೆಸ್ ಮುಖಂಡರ ಭೇಟಿ : ಕುಟುಂಬಕ್ಕೆ ಸಾಂತ್ವನ

24/08/2020

ಮಡಿಕೇರಿ ಆ. 24 : ಇತ್ತೀಚಿಗೆ ನಿಧನರಾದ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡ ಅಬೂಬಕ್ಕರ್ ಮತ್ತು  ಕಾಕೋಟುಪರಂಬು ಗ್ರಾ. ಪಂ. ಮಾಜಿ ಸದಸ್ಯರು ಮತ್ತು ಕಾಂಗ್ರೆಸ್ ಮುಖಂಡರಾಗಿದ್ದ ದಿ. ಬಲ್ಲಚಂಡ ಟಿಟ್ಟು ಅವರ ನಿವಾಸಕ್ಕೆ ಕಾಂಗ್ರೆಸ್ ಮುಖಂಡರು ಇಂದು ಭೇಟಿ ನೀಡಿದ್ದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ(ಡಿಸಿಸಿ) ಅಧ್ಯಕ್ಷರಾದ ಕೆ.ಕೆ. ಮಂಜುನಾಥ್ ಕುಮಾರ್ ನೇತೃತ್ವದ ಕಾಂಗ್ರೆಸ್ ಪ್ರಮುಖರ ಮತ್ತು ಕಾರ್ಯಕರ್ತರ ತಂಡ ವಿರಾಜಪೇಟೆ ಸಮೀಪದ ಕಡಂಗ ಮತ್ತು ಕಡಂಗಮರೂರಿನಲ್ಲಿರುವ ಮೃತ ಕಾಂಗ್ರೆಸ್ ಪ್ರಮುಖರ ನಿವಾಸಕ್ಕೆ ಪ್ರತ್ಯೇಕವಾಗಿ ತೆರಳಿ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿತು.
ಕಳೆದ ಹಲವು ದಶಕಗಳಿಂದ ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಅಬೂಬಕ್ಕರ್ ಮತ್ತು ಬಲ್ಲಚಂಡ ಟಿಟ್ಟು ಅವರು, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಮುಖಂಡರಾಗಿದ್ದರು. ಅವರು ಸ್ಥಳೀಯ ಜನಪ್ರತಿನಿಧಿಗಳಾಗಿ ಸಮಾಜಕ್ಕೆ ನೀಡಿರುವ ಸೇವೆ ಎಂದಿಗೂ ಸ್ಮರಣೀಯ. ಪಕ್ಷ ಸಂಘಟನೆಯಲ್ಲಿ ಅವರ ಕೊಡುಗೆ ಎಂದಿಗೂ ಮರೆಯುವಂತಿಲ್ಲ ಎಂದು ಮಂಜುನಾಥ್ ಕುಮಾರ್ ಅವರು ಸ್ಮರಿಸಿದರು. ಪಕ್ಷದ ಬಹುದೊಡ್ಡ ಆಸ್ತಿಯಾಗಿದ್ದ ಅಬೂಬಕ್ಕರ್ ಮತ್ತು ಟಿಟ್ಟು ಅವರ ಅಗಲಿಕೆ ವೈಯಕ್ತಿಕವಾಗಿಯೂ ಮತ್ತು ಪಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿದರು. 
ಕುಟುಂಬದವರ ದುಃಖದಲ್ಲಿ ಪಕ್ಷ ಪಾಲ್ಗೊಳ್ಳುತ್ತದೆ. ಕಾಂಗ್ರೆಸ್ ಪಕ್ಷ ಸದಾ ನೊಂದ ಕುಟುಂಬದ ಜೊತೆಗಿರುತ್ತದೆ ಎಂದು ಮಂಜುನಾಥ್ ಕುಮಾರ್ ಅವರು ದಿ. ಅಬೂಬಕ್ಕರ್ ಮತ್ತು ದಿ. ಟಿಟ್ಟು ಅವರ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ  ಪೂಣಚ್ಚ, ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ಕೆ.ಎ.ಯಾಕೂಬ್, ಡಿಸಿಸಿ ಉಪಾಧ್ಯಕ್ಷರಾದ ಆರ್.ಕೆ. ಸಲಾಂ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷರಾದ ಕೆ.ಎಂ. ಅಬ್ದುಲ್ ರಹಿಮಾನ್ (ಬಾಪು), ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷರಾದ ಹ್ಯಾರೀಸ್ ಕೊಳಕೇರಿ, ವಿರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಡಿ.ಪಿ ರಾಜೇಶ್ ಪದ್ಮನಾಭ, ಬೆನ್ನಿ ಅಗಸ್ಟೀನ್, ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಟಿ. ಈ. ಸುರೇಶ್, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾದ ಕೋಳುಮಂಡ ರಫೀಕ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಖಲೀಲ್ ಬಾಷಾ,  ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾದ ಸುಬೇರ್ ಕಡಂಗ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಭಾವ, ವಿರಾಜಪೇಟೆ ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಜಿ.ಜಿ. ಮೋಹನ್, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷರಾದ ಚೇಕು ಕಲ್ಲುಬಾಣೆ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಏಜಾಜ್ ಅಹಮದ್, ವಿರಾಜಪೇಟೆ ತಾ.ಪಂ. ಮಾಜಿ ಸದಸ್ಯರಾದ ಎಂ.ವೈ.ಆಲಿ ಮತ್ತು ಜಾನ್ಸನ್, ಕುಂಜಿಲ ಮುಸ್ಲಿಂ ಜಮಾಅತಿನ ಅಧ್ಯಕ್ಷರಾದ ಮೊಹಮ್ಮದ್ ಹಾಜಿ, ವಿವಿಧ ಗ್ರಾ.ಪಂ.ಗಳ  ಮಾಜಿ ಸದಸ್ಯರಾದ  ಮೇಕತಂಡ ರಘು ಸುಬ್ಬಯ್ಯ, ಪಿ.ಎಂ. ಹನೀಫಾ, ಎಂ.ಎಂ. ಇಸ್ಮಾಯಿಲ್, ಜಾಫರ್, ಕಾಂಗ್ರೆಸ್ ಮುಖಂಡರಾದ ಮಹಮದ್ ಕಡಂಗ, ರವೂಫ್, ಪೖಸಲ್ ಮೊದಲಾದವರು ಈ ತಂಡದಲ್ಲಿದ್ದರು.