ಸೀಲ್‍ಡೌನ್ ಪ್ರದೇಶಕ್ಕೆ ಕೊಡಗು ಜೆಡಿಎಸ್‍ನಿಂದ ಕಿಟ್ ವಿತರಣೆ

24/08/2020

ಮಡಿಕೇರಿ ಆ. 24 : ನಗರದ ಮುತ್ತಪ್ಪ ದೇವಾಲಯದ ಹಿಂಭಾಗದಲ್ಲಿ ಕೊರೋನಾ ಸೋಂಕಿತರು ಪತ್ತೆಯಾದ ಹಿನ್ನೆಲೆ ಈ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿದ್ದು, ಇಲ್ಲಿನ ಎಂಟು ಕುಟುಂಬಗಳಿಗೆ ಕೊಡಗು ಜಿಲ್ಲಾ ಜಾತ್ಯಾತೀತ ಜನತಾದಳದ ಸಹಯೋಗದಲ್ಲಿ ಯುವ ಜೆಡಿಎಸ್ ಹಾಗೂ ಮಹಿಳಾ ಜೆಡಿಎಸ್‍ನ ಕಾರ್ಯಕರ್ತರು ದಿನಸಿ ಕಿಟ್ ವಿತರಿಸಿದರು.
ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಅವರ ಆದೇಶದ ಮೇರೆಗೆ ಕಿಟ್ ವಿತರಿಸಲಾಗಿದ್ದು, ಈ ಹಿಂದೆಯೂ ಕೊಡಗಿನ ವಿವಿಧೆಡೆ ಸೀಲ್ ಡೌನ್ ಮಾಡಲಾದ ಪ್ರದೇಶಗಳಿಗೆ ಕಿಟ್ ವಿತರಿಸಲಾಗಿದೆ ಎಂದು ಮಹಿಳಾ ಘಟಕದ ಜಿಲ್ಲಾ ಕಾರ್ಯದರ್ಶಿ ಲೀಲಾಶೇಷಮ್ಮ ತಿಳಿಸಿದರು.
ಮಡಿಕೇರಿ ಮಹಿಳಾ ಅಧ್ಯಕ್ಷೆ ಸುನಂದಾ, ಉಪಾಧ್ಯಕ್ಷರಾದ ಮಮತ, ಯುವ ಜೆಡಿಎಸ್ ಕಾರ್ಯಕರ್ತರಾದ ಮುಜಿಬ್, ಫ್ರಿನ್ಸ್ ಹಾಜರಿದ್ದರು.