ಪುತ್ರ ಅನುತ್ತೀರ್ಣನಾದನೆಂದು ಅಪ್ಪ ನೇಣಿಗೆ ಶರಣಾದ : ಚೆಟ್ಟಳ್ಳಿಯಲ್ಲಿ ಘಟನೆ
24/08/2020

ಮಡಿಕೇರಿ : ಪುತ್ರ ಅನುತ್ತೀರ್ಣನಾದನೆಂದು ಮನನೊಂದ ಅಪ್ಪ ನೇಣಿಗೆ ಶರಣಾದ ಘಟನೆ ಚೆಟ್ಟಳ್ಳಿಯಲ್ಲಿ ನಡೆದಿದೆ. ಲೈನ್ ಮನೆಯಲ್ಲಿ ವಾಸವಿದ್ದ ಕಾರ್ಮಿಕ ರಘು(39) ಎಂಬಾತನೇ ಮೃತ ವ್ಯಕ್ತಿಯಾಗಿದ್ದು, ಚೆಟ್ಟಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪತ್ನಿ ಮಂಜುಳಾ ನೀಡಿರುವ ದೂರಿನ ಪ್ರಕಾರ ಪುತ್ರ ಪ್ರಶಾಂತ್ ಹತ್ತನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣನಾದ ಕಾರಣ ರಘು ನೊಂದುಕೊಂಡು ನಿತ್ಯ ಮದ್ಯ ಸೇವಿಸುತ್ತಿದ್ದ. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.