ಚೆಟ್ಟಿಮಾನಿ ಶ್ರೀಕೃಷ್ಣ ಗೋಶಾಲೆಯಲ್ಲಿ ಶೆಡ್ ಗಳ ನಿರ್ಮಾಣ

August 24, 2020

ಮಡಿಕೇರಿ : ಭಾಗಮಂಡಲದ ಚೆಟ್ಟಿಮಾನಿ ಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಕೃಷ್ಣ ಗೋಶಾಲೆಯಲ್ಲಿ ಶೆಡ್ ಗಳ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ ಎಂದು ಗೋಶಾಲೆಯ ಅಧ್ಯಕ್ಷ ಹರೀಶ್ ಜಿ. ಆಚಾರ್ಯ ತಿಳಿಸಿದ್ದಾರೆ.
ಚೆಟ್ಟಿಮಾನಿ ಪ್ರದೇಶದಲ್ಲಿ ಹೆಚ್ಚು ಮಳೆಯಾಗುವುದರಿಂದ ಹಸುಗಳ ಸುರಕ್ಷತೆಯ ದೃಷ್ಟಿಯಿಂದ ಸುಸಜ್ಜಿತ ಶೆಡ್ ಗಳ ಅಗತ್ಯವಿದ್ದು, ಕಾಮಗಾರಿಗೆ ಸಹಕಾರ ನೀಡುವವರು ಈ ಮೊ.ಸಂ : 9480180456 ನ್ನು ಸಂಪರ್ಕಿಸಬಹುದಾಗಿ ಎಂದು ಹೇಳಿದ್ದಾರೆ.

error: Content is protected !!