ವಿರಾಜಪೇಟೆಯಲ್ಲಿ ಸರಳ ರೀತಿಯಲ್ಲಿ ನಡೆದ ಗಣೇಶ ಮೂರ್ತಿಗಳ ವಿಸರ್ಜನೋತ್ಸವ

24/08/2020

ಮಡಿಕೇರಿ : ಪ್ರತಿ ವರ್ಷ ವಿಜೃಂಭಣೆಯಿಂದ ನಡೆಯುತ್ತಿದ್ದ ಐತಿಹಾಸಿಕ ವಿರಾಜಪೇಟೆ ಗಣೇಶೋತ್ಸವದ ಗಣೇಶ ಮೂರ್ತಿಗಳ ವಿಸರ್ಜನೋತ್ಸವ ಈ ಬಾರಿ ಕೋವಿಡ್ ಮಾರ್ಗಸೂಚಿ ಹಿನ್ನೆಲೆ ಸರಳ ರೀತಿಯಲ್ಲಿ ನಡೆಯಿತು. ಹನ್ನೊಂದು ದಿನಗಳಿಗೆ ಬದಲಾಗಿ ಮೂರು ದಿನಗಳ ಕಾಲ ಪ್ರತಿಷ್ಠಾಪಿಸಲ್ಪಟ್ಟಿದ್ದ ಗಣೇಶನ ವಿಗ್ರಹಗಳನ್ನು ಇಂದು ಯಾವುದೇ ಅದ್ಧೂರಿ ಮೆರವಣಿಗೆ ಇಲ್ಲದೆ ಗೌರಿ ಕೆರೆಗೆ ಕೊಂಡೊಯ್ದು ವಿಸರ್ಜಿಸಲಾಯಿತು. ಸುಮಾರು 21 ಗಣೇಶೋತ್ಸವ ಸಮಿತಿಗಳು ಗಣೇಶನನ್ನು ಪ್ರತಿಷ್ಠಾಪಿಸಿದ್ದವು.