ತಲಕಾವೇರಿಯಲ್ಲಿ ಗುಡ್ಡ ಕುಸಿತದಿಂದ ಮೃತಪಟ್ಟವರಿಗೆ ಜಿಲ್ಲಾ ಬಿಜೆಪಿಯಿಂದ ಶ್ರದ್ಧಾಂಜಲಿ ಸಲ್ಲಿಕೆ

August 25, 2020

ಮಡಿಕೇರಿ ಆ. 24 : ತಲಕಾವೇರಿಯ ಗಜಗಿರಿ ಗುಡ್ಡ ಕುಸಿತದಿಂದ ಮೃತಪಟ್ಟಿರುವ ನಾರಾಯಣ ಆಚಾರ್ , ಪತ್ನಿ ಶಾಂತ ಆಚಾರ್, ಹೋದರ ಆನಂದ ತೀರ್ಥ ಸ್ವಾಮೀಜಿ, ಸಹಾಯಕ ಆರ್ಚಕರಾದ ರವಿ ಕಿರಣ್ ಹಾಗೂ ಶ್ರೀನಿವಾಸ್ ಗೆ ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನುಡಿ ನಮನದ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಈ ಸಂದರ್ಭ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್, ತಲಕಾವೇರಿಯಲ್ಲಿ ನಾರಾಯಣ ಆಚಾರ್ ಅವರು ನೀಡಿದ ನಿರಂತರ ಸೇವೆಯನ್ನು ಶ್ಲಾಘಿಸಿದರು. ನಾರಾಯಣ ಆಚಾರ್ ಅವರ ಸರಳ ಸಜ್ಜನಿಕೆ ಮತ್ತು ವಿವಿಧ ಕ್ಷೇತ್ರದಲ್ಲಿ ದುಡಿಯುವ ಸಂದರ್ಭದಲ್ಲಿ ಅವರಿಗಿದ್ದ ಬದ್ಧತೆ ವಿಚಾರವಾಗಿ ಮಾತನಾಡಿದರು.
ಮಾಜಿ ಶಾಸಕ ಎಸ್.ಜಿ. ಮೇದಪ್ಪ ಮಾತನಾಡಿ, ಏಲಕ್ಕಿ ಸಹಕಾರ ಸಂಘದಲ್ಲಿ ಒಟ್ಟಿಗೆ ದುಡಿದ ಅನುಭವ ಹಂಚಿಕೊಂಡರು.
ಹಿರಿಯರಾದ ಎಂ.ಬಿ. ದೇವಯ್ಯ ಮಾತನಾಡಿ, ಈ ಹಿಂದೆ ದೇವಾಲಯದ ವಿವಿಧ ಕಾರ್ಯಕ್ರಮದಲ್ಲಿ ಜೊತೆಯಲ್ಲಿ ಕೆಲಸಮಾಡಿದ ಅನುಭವವನ್ನು ಹಂಚಿಕೊಂಡರು.
ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಭಕ್ತಾಧಿಗಳು ತಲಕಾವೇರಿ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭ ನಾರಾಯಣ ಆಚಾರ್ ಹಾಗೂ ಅವರ ಪತ್ನಿ ಭಕ್ತದಿಗಳನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು.
ರಾಜಕೀಯ ಮತ್ತು ಸಹಕಾರ ಕ್ಷೇತ್ರ ಅಲ್ಲದೆ ಧಾರ್ಮಿಕ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅಲ್ಲದೇ, ಅನೇಕ ಯುವಕರಿಗೆ ಮಾರ್ಗದರ್ಶಕರಾಗಿದ್ದರು.
ನಾರಾಯಣ ಆಚಾರ್ ಸೇರಿದಂತೆ ಆನಂದ ತೀರ್ಥ ಸ್ವಾಮೀಜಿ ಮತ್ತು ಅಗಲಿದ ಇಬ್ಬರು ಅರ್ಚಕ ಕುಟುಂಬಕ್ಕೆ ದುಃಖ ಬರಿಸೊ ಶಕ್ತಿ ನೀಡಲೆಂದು ಪ್ರಾಥಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾದಪ್ಪ ಸ್ವಾಗತಿಸಿದರು, ನಾಪಂಡ ರವಿ ಕಾಳಪ್ಪ ನಿರೂಪಿಸಿ, ಜಿಲ್ಲಾ ಉಪಾಧ್ಯಕ್ಷ ಅರುಣ್ ಕುಮಾರ್ ವಂದಿಸಿದರು.

error: Content is protected !!