ಎಸ್‍ಪಿಬಿ ಬಗ್ಗೆ ಹರಿದಾಡಿದ ವದಂತಿ

August 25, 2020

ಬೆಂಗಳೂರು ಆ.25 : ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ (ಎಸ್‍ಪಿಬಿ) ಅವರಿಗೆ ಕೊರೋನಾ ನೆಗೆಟಿವ್ ಬಂದಿದೆ ಎಂಬ ವದಂತಿಗಳು ಹರಿದಾಡಿದ ಕೆಲವೇ ಗಂಟೆಗಳ ಬಳಿಕ ಅವರ ಪುತ್ರ ಎಸ್.ಪಿ.ಚರಣ್ ಸ್ಪಷ್ಟೀಕರಣ ನೀಡಿದ್ದಾರೆ.
ಫೇಸ್‍ಬುಕ್ ನಲ್ಲಿ ವೀಡಿಯೊ ಹೇಳಿಕೆ ಬಿಡುಗಡೆ ಮಾಡುವ ಮೂಲಕ “ಅಪ್ಪನಿಗೆ ಕೋವಿಡ್ ನೆಗೆಟಿವ್ ಬಂದಿದೆ ಎಂಬ ಮಾಹಿತಿ ನನ್ನಿಂದ ಹೇಳಲ್ಪಟ್ಟದ್ದಲ್ಲ. ವದಂತಿಗಳನ್ನು ಹರಡದಿರಿ, ವದಂತಿಗಳಿಗೆ ಕಿವಿ ಕೊಡದಿರಿ” ಎಂದು ಚರಣ್ ಹೇಳಿದ್ದಾರೆ.
ಸೋಮವಾರ, ಎಸ್‍ಪಿಬಿ ಕೊರೋನಾವೈರಸ್ ನೆಗೆಟಿವ್ ವರದಿ ಸಿಕ್ಕಿದೆ ಎನ್ನುವ ವದಂತಿ ಎಲ್ಲೆಡೆ ಹರಡುತ್ತಿದೆ. ಇದು ದುರದೃಷ್ಟಕರ. “ಕೋವಿಡ್ ನೆಗೆಟಿವ್ ಅಥವಾ ಪಾಸಿಟಿವ್ ಏನೇ ಆಗಿದ್ದರೂ ಆರೋಗ್ಯ ಸ್ಥಿತಿ ಇನ್ನೂ ಹಾಗೆಯೇ ಇದೆ, ” ಎಂದು ಅವರು ಹೇಳಿದರು. ಎಸ್‍ಪಿಬಿ ಅವರಿಗೆ ಲೈಫ್ ಸಪೋರ್ಟ್ ಅನ್ನು ಮುಂದುವರಿಸಲಾಗಿದೆ. ಆದರೆ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆÉ ಎಂದು ಅವರು ಹೇಳಿದರು.

error: Content is protected !!