ಕೊಡಗಿನ ಮುಕ್ಕಾಟಿರ ಸೂರಜ್ ಅಯ್ಯಪ್ಪ ಅಮೆರಿಕಾದ ಪ್ರತಿಷ್ಠಿತ ನೌಕಯುದ್ಧ ಕಾಲೇಜಿಗೆ ಭಾರತದ ಪ್ರತಿನಿಧಿ

25/08/2020

ಮಡಿಕೇರಿ ಆ. 25 : ಕೊಡಗಿನ ಹೆಮ್ಮೆಯ ಸುಪುತ್ರ ಲೆಫ್ಟಿನೆಂಟ್ ಕಮಾಂಡರ್ ಮುಕ್ಕಾಟಿರ ಸೂರಜ್ ಅಯ್ಯಪ್ಪ ಅಮೆರಿಕಾದ ಪ್ರತಿಷ್ಠಿತ ನೌಕಾಯುದ್ಧ ಕಾಲೇಜಿಗೆ ಭಾರತದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.
ಮೂಲತಃ ಗೋಣಿಕೊಪ್ಪ ಅರ್ವತೋಕ್ಲು ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಎಂ.ಎ. ಕಾರ್ಯಪ್ಪ ಹಾಗೂ ಸರಸ್ವತಿ ಕಾರ್ಯಪ್ಪ (ತವರುಮನೆ ಅಣ್ಣಳಮಡ)ರ ಪುತ್ರರಾಗಿದ್ದು, ಡೆಹ್ರಡೂನ್‍ನ ರಾಷ್ಟ್ರೀಯ ಮಿಲಿಟರಿ ಕಾಲೇಜು (ಆರ್‍ಐಎಂಸಿ)ಯಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿ ನಂತರ ನೇವಲ್ ಅಕಾಡೆಮಿಯಿಂದ ‘ಅಕೆಡಮಿ ಕೆಡೆಟ್ ಕ್ಯಾಪ್ಟನ್’ ಆಗಿ ಗುರುತಿಸಿಕೊಳ್ಳುವುದರೊಂದಿಗೆ ಪದವಿ ಪಡೆದಿರುತ್ತಾರೆ.
2010ರಲ್ಲಿ ಭಾರತೀಯ ನೌಕಾ ದಳದ ಅಧಿಕಾರಿಯಾಗಿ ಇವರ ಎಲ್ಲಾ ಚಟುವಟಿಕೆಗಳಲ್ಲಿ ಮೊದಲಿಗರಿದ್ದು ‘ಸ್ವಾರ್ಡ್ ಆಫ್ ಹಾನರ್’ ಹಾಗೂ ‘ಚೀಫ್ ಆಫ್ ನೇವಲ್ ಸ್ಟಾಪ್’ ಬಂಗಾರದ ಪದಕಕ್ಕೂ ಭಜನರಾಗುವುದರೊಂದಿಗೆ 2010ರಲ್ಲಿ ನೌಕಾ ಪಡೆಯ ಉತ್ಕøಷ್ಠ ಕಾರ್ಯ ನಿವಾಹಕ ಪಡೆಯ ಅಧಿಕಾರಿಯಾಗಿ ಸೇರ್ಪಡೆಗೊಂಡಿರುತ್ತಾರೆ. ಸೂರಜ್ ಅವರ ಕಾರ್ಯಾವಧಿಯಲ್ಲಿ ಹಲವಾರು ಸ್ಥಾನಗಳನ್ನು ಅಲಂಕರಿಸಿದ್ದು, ಕಮಾಂಡಿಂಗ್ ಆಫಿಸರ್, ನೇವಲ್ ಅಕಾಡೆಮಿಯ ಬೋಧಕ ಸೇರಿದಂತೆ ನೌಕಾಪಡೆಯ ಕಾರ್ಯಚರಣೆಯ ಮುಂಚೂಣಿ ಸ್ಥಾನದಲ್ಲಿದ್ದರು.
2016ರ ವಿಶಾಖಪಟ್ಟಣದಲ್ಲಿ ರಾಷ್ಟ್ರಪತಿಗಳಿಂದ ಗಾರ್ಡ್ ಆಫ್ ಹಾನರ್ ನ ಗೌರವಕ್ಕೆ ಪಾತ್ರರಾಗಿದ್ದರು. ಈ ವರ್ಷ ಅಮೇರಿಕದಲ್ಲಿ ನಡೆಯುವ ಸಿಬ್ಬಂದಿಗಳ ತರಬೇತಿಯಲ್ಲಿ 52 ದೇಶಗಳ ಅಧಿಕಾರಿಗಳ ಪೈಕಿ ಇವರು ಒಬ್ಬರಾಗಿದ್ದಾರೆ.
ಸೂರಜ್ ಅವರ ಪತ್ನಿ ಡಾ. ಯಮುನಾ (ಗೋಣಿಕೊಪ್ಪ ಹರಿಶ್ಚಂದ್ರಪುರ ನಿವಾಸಿ ಮನೆಯಪಂಡ ಕಾಮು ಮತ್ತು ದಿ. ಮನು ಮಂದಣ್ಣ ಅವರ ಪುತ್ರಿ) ದಂತ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೂರಜ್ ಅವರು ಹೇಳುವಂತೆ ಅವರ ತಾಯಿ ಸರಸ್ವತಿ ಕಾರ್ಯಪ್ಪ ತಮ್ಮ ಜೀವನದುದ್ದಕ್ಕೂ ಸ್ಪೂರ್ತಿಯಾಗಿದ್ದರು. ತಮಗೆ ಸಂದಿರುವ ಗೌರವವನ್ನು ಅವರ ತಾಯಿಗೆ ಸಮರ್ಪಿಸಿದ್ದಾರೆ.
ಲಿಫ್ಟಿನೆಂಟ್ ಕಮಾಂಡರ್ ಸೂರಜ್ ಅಯ್ಯಪ್ಪನವರು ಕೊಡವ ಸಮುದಾಯದ ಕೀರ್ತಿ ಹೆಚ್ಚಿಸಿದ್ದು, ಬಾನಸ್ವಾಡಿ ಕೊಟವ ಸಂಘವು ಸೂರಜ್ ಅವರ ಭವಿಷ್ಯದಲ್ಲಿ ಮತ್ತಷ್ಟು ಉತ್ತಂಗಕ್ಕೇರಲಿ ಎಂದು ಕಾವೇರಮ್ಮ ಹಾಗೂ ಇಗ್ಗುತ್ತಪ್ಪ ದೇವರಲ್ಲಿ ಪ್ರಾರ್ಥಿಸಿದ್ದಾರೆ.