ರೂ.32 ಕೋಟಿ ವೆಚ್ಚದಲ್ಲಿ ವಿರಾಜಪೇಟೆ-ಮಡಿಕೇರಿಗೆ 66 ಕೆ.ವಿ. ಲೈನ್ ಕಾಮಗಾರಿ

25/08/2020

ಮಡಿಕೇರಿ : ಸುಮಾರು ರೂ.32 ಕೋಟಿ ವೆಚ್ಚದ ವಿರಾಜಪೇಟೆ- ಮಡಿಕೇರಿ 66 ಕೆ.ವಿ.ಲೈನ್ ಕಾಮಗಾರಿ ಆರಂಭಿಸಲು ಕಾಲ ಕೂಡಿ ಬಂದಿದೆ. ಟೆಂಡರ್ ಪ್ರಕ್ರಿಯೆ ಅಕ್ಟೋಬರ್ ನಲ್ಲಿ ಪೂರ್ಣಗೊಳ್ಳಲಿದ್ದು, ಡಿಸೆಂಬರ್ ತಿಂಗಳಿನಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಕೆಪಿಟಿಸಿಎಲ್ ಮಡಿಕೇರಿಯ ಕಾರ್ಯಪಾಲಕ ಅಭಿಯಂತರ ಮಾದೇಶ್ ತಿಳಿಸಿದ್ದಾರೆ.
ದಕ್ಷಿಣ ಕೊಡಗು ನಿರಂತರ ‘ಪವರ್ ಕಟ್’ ಸಮಸ್ಯೆಯನ್ನು ಎದುರಿಸುತ್ತಿದ್ದು, ಮಳೆಗಾಲದಲ್ಲಿ ವಿರಾಜಪೇಟೆ ತಾಲ್ಲೂಕಿನಲ್ಲಿ ವಿದ್ಯುತ್ ಕೊರತೆ ಉಂಟಾಗುತ್ತಿತ್ತು. ಯೋಜನೆ ಪೂರ್ಣಗೊಂಡರೆ ಸಮಸ್ಯೆ ಬಗೆಹರಿಯಲಿದೆ.