ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ವಿರೋಧ

25/08/2020

ಮಡಿಕೇರಿ ಆ. 25 : ಮೈಸೂರಿನಿಂದ ಮಡಿಕೇರಿ ಮೂಲಕ ಬಂಟ್ವಾಳ ತಲುಪಲಿರುವ ಬಹುಪಥ ರಾಷ್ಟ್ರೀಯ ಹೆದ್ದಾರಿ ಮೊದಲ ಹಂತದ ಸರ್ವೆ ಕಾರ್ಯ ಆನೆಕಾಡು ವ್ಯಾಪ್ತಿಯಲ್ಲಿ ನಡೆಸಿದ ಬೆನ್ನಲೇ ಮೂಲ ನಿವಾಸಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಸತತ ಮೂರು ವರ್ಷಗಳಿಂದ ಕೊಡಗಿನ ಬೆಟ್ಟಗಳು ಕುಸಿದು ಬಿದ್ದು ಸಾವು ನೋವುಗಳು ಸಂಭವಿಸಿದೆ. ಜಿಲ್ಲೆಯ ಬೆಟ್ಟಗಳು ಅಪಾಯದಂಚಿನಲ್ಲಿದ್ದು, ರಸ್ತೆ ವಿಸ್ತರಣೆಯಿಂದ ಮತ್ತಷ್ಟು ಅಪಾಯ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.