ಕರಿಕೆ, ಪಾಣತ್ತೂರು ಸಂಚಾರಕ್ಕೆ ಅನುಮತಿ

25/08/2020

ಮಡಿಕೇರಿ ಆ. 25 : ಕೊಡಗಿನ ಗಡಿ ಗ್ರಾಮ ಕರಿಕೆಯಿಂದ ಕೇರಳದ ಪಾಣತ್ತೂರಿಗೆ ತೆರಳಲು ಅವಕಾಶ ಕಲ್ಪಿಸಲಾಗಿದೆ.
ಕರಿಕೆ ಭೌಗೋಳಿಕವಾಗಿ ಕೊಡಗು ಜಿಲ್ಲೆಯಲ್ಲಿದ್ದರೂ ಇಲ್ಲಿನ ಜನ ಪಕ್ಕದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯೊಂದಿಗೆ ವ್ಯವಹಾರಿಕ ಸಂಪರ್ಕ ಹೊಂದಿದ್ದಾರೆ. ಮಹಾಮಳೆಗೆ ಜಿಲ್ಲೆಯ ಮುಖ್ಯವಾಹಿನಿಯಿಂದ ಸಂಪರ್ಕ ಕಳೆದುಕೊಂಡಿದ್ದ ಕರಿಕೆ ಜನ ಕೋವಿಡ್ ಮಾರ್ಗಸೂಚಿಯಿಂದ ಕೇರಳಕ್ಕೂ ತೆರಳಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಈಗ ಸಂಚಾರ ಆರಂಭಗೊಂಡಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.