ಅಕ್ರಮ ಮೀನು ಶಿಕಾರಿ ಮಾಡಿದರೆ ಕಠಿಣ ಕ್ರಮ

25/08/2020

ಮಡಿಕೇರಿ ಆ. 25 : ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ನಿಯಮ ಬಾಹಿರವಾಗಿ ಮೀನು ಶಿಕಾರಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಕಾವೇರಿ ಮೀನುಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಇ.ಎಸ್.ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ.
ಸರಕಾರದ ನಿಯಮದಂತೆ ಅಧಿಕೃತವಾಗಿ ಗುತ್ತಿಗೆ ಆಧಾರದಲ್ಲಿ ಹಿನ್ನೀರಿನಲ್ಲಿ ಮೀನು ಮರಿಗಳನ್ನು ಬಿಡಲಾಗಿದೆ. ಅಕ್ರಮವಾಗಿ ಈ ಪ್ರದೇಶದಿಂದ ಮೀನು ಹಿಡಿಯುತ್ತಿರುವ ಬಗ್ಗೆ ಮಾಹಿತಿ ದೊರೆತ್ತಿದ್ದು, ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.