ಕುಶಾಲನಗರದಲ್ಲಿ ಪೊಲೀಸರಿಂದ ಕುಂದುಕೊರತೆ ಸಭೆ

25/08/2020

ಮಡಿಕೇರಿ ಆ. 25 : ಕುಶಾಲನಗರದ ಪೊಲೀಸ್ ಠಾಣಾ ಸಭಾಂಗಣದಲ್ಲಿ ಡಿವೈಎಸ್‍ಪಿ ಶೈಲೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ವರ್ಗದ ಕುಂದುಕೊರತೆ ಸಭೆ ನಡೆಯಿತು.
ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿರುವ ದಲಿತ ಕಾಲೋನಿಗಳ ಸಮಸ್ಯೆಗಳು ಹಾಗೂ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಸಭೆಯಲ್ಲಿ ಹಾಜರಿದ್ದ ದಲಿತ ಮುಖಂಡರು ಪೊಲೀಸರಿಗೆ ಮಾಹಿತಿ ನೀಡಿದರು. ಶೈಲೇಂದ್ರ ಕುಮಾರ್ ಅವರು ಸೂಕ್ತ ಕ್ರಮದ ಭರವಸೆ ನೀಡಿದರು.