ಕಾಟೋಳಪ್ಪ ದೇವಾಲಯದ ಅಭಿವೃದ್ಧಿಗೆ ನೆರವು

25/08/2020

ಮಡಿಕೇರಿ ಆ. 25 : ಮಡಿಕೇರಿ ತಾಲ್ಲೂಕು ಮುಕ್ಕೋಡ್ಲುವಿನ ಅವಂಡಿ ಗ್ರಾಮದ ಕಾಟೋಳಪ್ಪ ದೇವಾಲಯದ ಅಭಿವೃದ್ಧಿಗೆ ಕಾಂಗ್ರೆಸ್ ಪ್ರಮುಖ ಹಾಗೂ ಸಮಾಜ ಸೇವಕ ಕದ್ದಣಿಯಂಡ ಹರೀಶ್ ಬೋಪಣ್ಣ ಅವರು ಆರ್ಥಿಕ ನೆರವು ನೀಡಿದ್ದಾರೆ. ಇತ್ತೀಚೆಗೆ ಭಾರೀ ಗಾಳಿ, ಮಳೆಗೆ ಮರವೊಂದು ಬಿದ್ದು ದೇವಾಲಯ ಸಂಪೂರ್ಣ ಹಾನಿಗೀಡಾಗಿತ್ತು. ದೇವಾಲಯದ ಜೀರ್ಣೋದ್ಧಾರಕ್ಕಾಗಿ ಗ್ರಾಮಸ್ಥರು ಮುಂದಾಗಿರುವುದರಿಂದ ಸ್ಥಳಕ್ಕೆ ಭೇಟಿ ನೀಡಿದ ಹರೀಶ್ ಅವರು ರೂ.10 ಸಾವಿರವನ್ನು ಆಡಳಿತ ಮಂಡಳಿ ಪ್ರಮುಖರಿಗೆ ನೀಡಿದರು.