ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್

25/08/2020

ಮಡಿಕೇರಿ ಆ. 25 : ಮಹಾಮಳೆಯಿಂದ ಕಾಫಿ ಫಸಲನ್ನು ಕಳೆದುಕೊಂಡಿರುವ ಕೊಡಗಿನ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸುವ ಕುರಿತು ಸರ್ಕಾರದೊಂದಿಗೆ ಸಮಾಲೋಚಿಸುವುದಾಗಿ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ತಿಳಿಸಿದ್ದಾರೆ.
ಸತತ ಮೂರು ವರ್ಷಗಳಿಂದ ನಷ್ಟ ಅನುಭವಿಸುತ್ತಿರುವ ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಒತ್ತಾಯಿಸಿ ದಕ್ಷಿಣ ಕೊಡಗಿನ ಬೆಳೆಗಾರರು ಮನವಿ ಸಲ್ಲಿಸಿ ಚರ್ಚಿಸಿದ ಸಂದರ್ಭ ಶಾಸಕರು ಈ ಭರವಸೆ ನೀಡಿದರು.