8 ವರ್ಷದ ಬಾಲಕಿಯನ್ನು ಕಾಡಿದ ಕೋವಿಡ್ : ಕೊಡಗಿನಲ್ಲಿ ಸೋಂಕಿತರ ಸಂಖ್ಯೆ 1239ಕ್ಕೆ ಏರಿಕೆ

25/08/2020

ಮಡಿಕೇರಿ ಆ.25 : ಕುಶಾಲನಗರದ ಬಸಪ್ಪ ಲೇಔಟ್ ನ 8 ವರ್ಷದ ಬಾಲಕಿಯಲ್ಲಿ ಕೋವಿಡ್ ಕಾಣಿಸಿಕೊಂಡಿದೆ. ಇಂದು ಬೆಳಗ್ಗೆ ಗಂಟಲ ದ್ರವ ಪರೀಕ್ಷೆಯ ವರದಿ ಬಂದಿದ್ದು, ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1239ಕ್ಕೆ ಏರಿಕೆಯಾಗಿದ್ದು, ಈ ಪೈಕಿ 953 ಮಂದಿ ಗುಣಮುಖರಾಗಿದ್ದಾರೆ. 270 ಸಕ್ರಿಯ ಪ್ರಕರಣಗಳಿದ್ದು, 16 ಮಂದಿ ಸಾವಿಗೀಡಾಗಿದ್ದಾರೆ. ಈಲ್ಲೆಯಲ್ಲಿ ನಿಯಂತ್ರಿತ ವಲಯಗಳ ಸಂಖ್ಯೆ 257ರಷ್ಟಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಕುಶಾಲನಗರದ ಸೋಮೇಶ್ವರ ಬಡಾವಣೆಯ 45, 24 ಮತ್ತು 25 ವರ್ಷದ ಮಹಿಳೆಯರು, ಮುಳ್ಳುಸೋಗೆಯ ಶಕ್ತಿ ಬಡಾವಣೆಯ 41 ವರ್ಷದ ಪುರುಷ, 1ನೇ ಬ್ಲಾಕ್ ನ 70 ವರ್ಷದ ಮಹಿಳೆ, ನಿಜಾಮುದ್ದೀನ್ ಲೇಔಟ್ ನ 44 ವರ್ಷದ ಪುರುಷನಿಗೆ ಸೋಂಕು, ಡ್ರೀಮ್ ಲೇಔಟ್‍ನ ನಿಸರ್ಗಧಾಮ ಬಳಿಯ 30 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ವೀರಾಜಪೇಟೆ ಶ್ರೀಮಂಗಲದ ಕೃಷ್ಣ ದೇವಾಲಯ ಬಳಿಯ 19 ಮತ್ತು 49 ವರ್ಷದ ಪುರುಷರು 76 ವರ್ಷದ ಮಹಿಳೆ, ಮಡಿಕೇರಿ ಎಮ್ಮೆಮಾಡುವಿನ ಪಡಿಯಾಣಿ ಮಸೀದಿ ಬಳಿಯ 58 ವರ್ಷದ ಪುರುಷನಲ್ಲಿ ಸೋಂಕು ಗೋಚರಿಸಿದೆ.
ವೀರಾಜಪೇಟೆ ವಿ.ಬಾಡಗದ 63 ವರ್ಷದ ಮಹಿಳೆ, ನೆಲ್ಲಿಹುದಿಕೇರಿ ಬರಡಿ ರಸ್ತೆಯ ನಲ್ವತ್ತೆಕ್ರೆಯ 36 ವರ್ಷದ ಪುರುಷ, ಸುಂಟಿಕೊಪ್ಪ ಅಂಬೇಡ್ಕರ್ ಬಡಾವಣೆಯ 18 ವರ್ಷದ ಮಹಿಳೆ, ಮಡಿಕೇರಿ ಸುದರ್ಶನ ವೃತ್ತದ ಕೆಇಬಿ ವಸತಿಗೃಹದ 17 ವರ್ಷದ ಬಾಲಕಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಅವರು ಹೇಳಿದ್ದಾರೆ.
ವೀರಾಜಪೇಟೆ ಮಲ್ಲಮಟ್ಟಿ ಬಳಿಯ ಮೈತಾಡಿ ಚಾಮಿಯಾಲ ಗ್ರಾಮದ 70 ವರ್ಷದ ಪುರುಷ, ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಹಾಸನ ಜಿಲ್ಲೆಯ ಮಲ್ಲೇನಹಳ್ಳಿಯ 45 ವರ್ಷದ ಮಹಿಳೆ, ಮಡಿಕೇರಿ ಕಾವೇರಿ ಲೇಔಟ್‍ನ 54 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.