ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಕಡಂಗ ಗ್ರಾಮದ ವಿದ್ಯಾರ್ಥಿ ಗಳಿಗೆ ಸನ್ಮಾನ

25/08/2020

ಮಡಿಕೇರಿ ಆ. 25 : ಎಸ್. ಎಸ್.ಎಲ್.ಸಿ ಪರೀಕ್ಷೆ ಯಲ್ಲಿ ಅತ್ಯಧಿಕ ಅಂಕಗಳಿಸಿದ ಕಡಂಗ ಗ್ರಾಮದ
ವಿದ್ಯಾರ್ಥಿಗಳನ್ನು , ಎಸ್.ಕೆ.ಎಸ್.ಎಸ್.ಎಫ್ ಜಿ ಸಿ ಸಿ ಬಳಗ ದಿಂದ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ಕಡಂಗದಲ್ಲಿ ನಡೆದ ಸರಳ ಸಮಾರಂಭದ ನೇತೃತ್ವವನ್ನು ವಿಖಾಯಯ ಸದಸ್ಯರಾದ ಶಕೀರ್ ಮತ್ತು ಅಶ್ರಫ್ ರವರು ವಹಿಸಿದ್ದರು, ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಗ್ರಾಮದ ವಿದ್ಯಾರ್ಥಿಗಳಾದ ಫಯಾಜ್ ಕೆ ಎಂ, ಸಿನಾನ್ ಕೆ ಎ, ರೂಪದರ್ಶಿನಿ, ಅಶಿಫಾ , ಅಜ್ಮಲ್, ಫಾಹಿಜ್ ಟಿ ಎ, ರವರನ್ನು ಬಹುಮಾನ ನೀಡುವ ಮೂಲಕ ಸನ್ಮಾನಿಸಿ, ಪ್ರೋತ್ಸಾಹಿಸಲಾಯಿತು. ಹಾಗೂ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸ ಜೀವನ ಉತ್ತಮವಾಗಿ ಮೂಡಿ ಬರಲಿ ಎಂದು ಹಾರೈಸಿದರು. ಈ ಸಂದರ್ಭ ಎಸ್.ಕೆ.ಎಸ್.ಎಸ್.ಎಫ್ ಜಿಸಿಸಿ ಪ್ರತಿನಿಧಿ ಹಸೈನಾರ್ ಪಾಲ್ಗೊಂಡಿದ್ದರು.
ಎಸ್.ಕೆ.ಎಸ್.ಎಸ್.ಎಫ್ ಜಿಸಿಸಿ ಅಧ್ಯಕ್ಷರಾದ ಸಿ,ಎಚ್ಅಬ್ದುಲ್ ರಜಾಕ್ , ಕಾರ್ಯದರ್ಶಿ ಲತೀಫ್ ಕಡಂಗರವರು ದುಬೈ ನಿಂದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.