ವೈಷ್ಣೋದೇವಿ ಯಾತ್ರೆಗೆ ಬುಕಿಂಗ್ ಆರಂಭ

26/08/2020

ಜಮ್ಮು ಆ.26 : ಶ್ರೀ ಮಾತಾ ವೈಷ್ಣೋದೇವಿ ಯಾತ್ರಿಕರ ಆನ್ ಲೈನ್ ಯಾತ್ರೆಗೆ ನೋಂದಣಿ ಮತ್ತು ಹೆಲಿಕಾಪ್ಟರ್ ಬುಕಿಂಗ್ ಬುಧವಾರದಿಂದ ಆರಂಭವಾಗಲಿದೆ.
ಆಗಸ್ಟ್ 26 ರಿಂದ ಸೆ. 5 ರವರೆಗೆ ವೈಷ್ಣೋದೇವಿ ಆನ್ ಲೈನ್ ಯಾತ್ರೆಗೆ ನೋಂದಣಿ ಮತ್ತು ಹೆಲಿಕಾಪ್ಟರ್ ಬುಕಿಂಗ್ ಲಭ್ಯವಿರಲಿದೆ ಎಂದು ಶ್ರೀ ಮಾತಾ ವೈಷ್ಣೋದೇವಿ ದೇಗುಲ ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಕುಮಾರ್ ಯುಎನ್ ಐಗೆ ತಿಳಿಸಿದ್ದಾರೆ.
ಇದು ನಿರಂತರ ಪ್ರಕ್ರಿಯೆಯಾಗಲಿದೆ. ಯಾತ್ರಿಕರು ಆನ್ ಲೈನ್ ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಕತ್ರಾ ತಲುಪುವ ಮುನ್ನ ಹೆಲಿಕಾಪ್ಟರ್ ಟಿಕೆಟ್ ಗಳನ್ನು ಮುಂಚಿತವಾಗಿ ಕಾಯ್ದಿರಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ, ಅಧಿಕೃತ ಮಾಹಿತಿಯಂತೆ, ಇತರ ರಾಜ್ಯಗಳಿಂದ ಬರುವ ಯಾತ್ರಿಕರ ಕೋಟಾವನ್ನು ದಿನಕ್ಕೆ 100 ರಿಂದ 250ಕ್ಕೆ ಹೆಚ್ಚಿಸಲಾಗಿದೆ.