ಕೊಡಗಿನಲ್ಲಿ 970 ಮಂದಿ ಗುಣಮುಖ

26/08/2020

ಮಡಿಕೇರಿ ಆ. 26 : ಜಿಲ್ಲೆಯಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆ ವೇಳೆಗೆ 8 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ.
ಮಡಿಕೇರಿ ಕನ್ನಂಡಬಾಣೆಯ ದೃಷ್ಟಿ ಗಣಪತಿ ದೇವಾಲಯ ಸಮೀಪದ 52 ವರ್ಷದ ಪುರುಷ.
ಕೂಡಿಗೆ ಕುಡ್ಲೂರುವಿನ ನವಗ್ರಾಮ ಬಡಾವಣೆಯ 50 ವರ್ಷದ ಪುರುಷ, 16 ವರ್ಷದ ಬಾಲಕ, 45 ಮತ್ತು 20 ವರ್ಷದ ಮಹಿಳೆಯರು.
ಹೆಬ್ಬಾಲೆ ಮರೂರಿನ ಬಸವೇಶ್ವರ ಆಂಜನೇಯ ದೇವಾಲಯ ಬಳಿಯ 45 ವರ್ಷದ ಪುರುಷ.
ವಿರಾಜಪೇಟೆ ಸುಣ್ಣದಬೀದಿಯ 76 ವರ್ಷದ ಪುರುಷ.
ಗೋಣಿಕೊಪ್ಪ ಪಟೇಲ್ ನಗರದ 27 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1250 ಆಗಿದ್ದು, 970 ಮಂದಿ ಗುಣಮುಖರಾಗಿದ್ದಾರೆ. 263 ಸಕ್ರಿಯ ಪ್ರಕರಣಗಳಿದ್ದು, 17 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 226 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.