ಹಾಗಲಕಾಯಿ ಗೊಜ್ಜು ಮಾಡುವ ವಿಧಾನ

26/08/2020

ಇದು ಔಷಧೀಯ ಮೂಲದ,ಈ ದಾರುವಿಲ್ಲದ, ಎಲೆರಹಿತ ಸಸ್ಯಾಂಗವನ್ನು ಹೊಂದಿರುವ ಬಳ್ಳಿಯು ಐದು ಮೀಟರ್ ಗಳವರೆಗೂ ಬೆಳೆಯಬಲ್ಲದು. ಇದು ಸರಳವಾದ, ೪–೧೨ ಸೆಂನಷ್ಟು ಅಡ್ಡವಾಗಿ ಪರ್ಯಾಯ ಎಲೆಗಳನ್ನು, ಜೊತೆಗೆ ೩–೭ರಷ್ಟು ಆಳವಾಗಿ ಪ್ರತ್ಯೇಕಗೊಂಡ ಹಾಲೆಗಳನ್ನು ಹೊಂದಿರುತ್ತದೆ. ಪ್ರತಿ ಸಸ್ಯವೂ, ಪ್ರತ್ಯೇಕವಾದ ಹಳದಿ ಗಂಡು ಹಾಗು ಹೆಣ್ಣು ಹೂವುಗಳನ್ನು ಹೊಂದಿರುತ್ತದೆ. ಉತ್ತರ ಖಗೋಳಾರ್ಧದಲ್ಲಿ, ಜೂನ್ ನಿಂದ ಜುಲೈ ತಿಂಗಳೊಳಗೆ ಇದು ಹೂಬಿಡುತ್ತದೆ, ಹಾಗು ಸೆಪ್ಟೆಂಬರ್ ನಿಂದ ನವೆಂಬರ್ ನ ಅವಧಿಯಲ್ಲಿ ಹಣ್ಣು ಬಿಡುತ್ತದೆ.

ಬಹಳ ಹಿಂದಿನಿಂದಲೂ ಹಾಗಲಕಾಯಿಯನ್ನು ಹಲವಾರು ಏಶಿಯನ್ ಹಾಗು ಆಫ್ರಿಕನ್ ಸಾಂಪ್ರದಾಯಿಕ ಔಷಧೀಯ ಪದ್ಧತಿಗಳಲ್ಲಿ ಬಳಸಲಾಗುತ್ತದೆ.

ಬೇಕಾಗುವ ಸಾಮಾಗ್ರಿಗಳು : ಹಾಗಲಕಾಯಿ 4(ಸಾಧಾರಣ ಗಾತ್ರದ್ದು), ಈರುಳ್ಳಿ 2, ಟೊಮೆಟೊ 2, ಆಲೂಗಡ್ಡೆ 1, ಹಸಿ ಮೆಣಸಿನಕಾಯಿ 3, ಅರಿಶಿಣ ಪುಡಿ 1/4 ಚಮಚ, ಖಾರದ ಪುಡಿ 1/4 ಚಮಚ, ಜೀರಿಗೆ ಪುಡಿ 1/4 ಚಮಚ, ತೆಂಗಿನ ತುರಿ 4-5, ಚಮಚ, ರುಚಿಗೆ ತಕ್ಕ ಉಪ್ಪು, ನಿಂಬೆ ರಸ 2 ಚಮಚ, ಕರಿ ಬೇವಿನ ಎಲೆ, ಎಣ್ಣೆ 2 ಚಮಚ.

ತಯಾರಿಸುವ ವಿಧಾನ:  ಉಪ್ಪು, ಖಾರದ ಪುಡಿ, ಅರಿಶಿಣ ಪುಡಿ, ನಿಂಬೆ ರಸವನ್ನು ಕತ್ತರಿಸಿದ ಹಾಗಲಕಾಯಿ ಜೊತೆ ಹಾಕಿ ಮಿಕ್ಸ್ ಮಾಡಿ ಒಂದು ಗಂಟೆ ಕಾಲ ಇಡಿ.  ನಂತರ ತಳ ಸ್ವಲ್ಪ ಅಗಲವಿರುವ ಪಾತ್ರೆಗೆ ಫ್ರೈ ಮಾಡಲು ಸಾಕಾಗುವಷ್ಟು ಎಣ್ಣೆ ಹಾಕಿ ಅದರಲ್ಲಿ ಹಾಗಲಕಾಯಿ ಹಾಕಿ ಅದು ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ ಒಂದು ಪಾತ್ರೆಯಲ್ಲಿ ತೆಗೆದಿಡಿ. ಈಗ ಅದೇ ಪಾತ್ರೆಗೆ 1 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ, ಜೀರಿಗೆ ಹಾಕಿ ಹಸಿ ಮೆಣಸಿನಕಾಯಿ, ಕರಿ ಬೇವಿನ ಎಲೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ನಂತರ ಟೊಮೆಟೊ ಹಾಕಿ 2-3 ನಿಮಿಷ ಫ್ರೈ ಮಾಡಿ, ಈಗ ಫ್ರೈ ಮಾಡಿಟ್ಟ ಹಾಗಲಕಾಯಿ ಹಾಕಿ, ಗರಂ ಮಸಾಲ, ತುರಿದ ತೆಂಗಿನಕಾಯಿ, ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ ಮತ್ತೆ 5 ನಿಮಿಷ ಫ್ರೈ ಮಾಡಿದರೆ ಹಾಗಲಕಾಯಿ ಗೊಜ್ಜು ರೆಡಿ.