ಆ.27 ರಂದು ವಿರಾಜಪೇಟೆ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
26/08/2020

ಮಡಿಕೇರಿ ಆ.26 : ವಿರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಬಿ.ಶೆಟ್ಟಿಗೇರಿ, ವಿರಾಜಪೇಟೆ, ಬೇತ್ರಿ, ಪಾಲಂಗಾಲ, ಕ್ಲಬ್ ಮಹೇಂದ್ರ ಮತ್ತು ಹೆಗ್ಗಳ ಫೀಡರ್‍ನಲ್ಲಿ ವಿದ್ಯುತ್ ಜಾಲದ ಸಮಗ್ರ ಅಭಿವೃದ್ದಿ ಯೋಜನೆ ಹಾಗೂ ತುರ್ತು ನಿರ್ವಹಣೆ ಕಾಮಗಾರಿಯನ್ನು ನಡೆಸಬೇಕಿರುವುದರಿಂದ ಆಗಸ್ಟ್, 27 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಬಿಟ್ಟಂಗಾಲ, ಬಿ.ಶೆಟ್ಟಿಗೇರಿ, ವಿ.ಬಾಡಗ, ಕಾಕೋಟುಪರಂಬು, ಕಡಂಗ, ಮೈತಾಡಿ, ಪಾಲಂಗಾಲ ಕೆದಮುಳ್ಳೂರು, ಮಹೇಂದ್ರ, ಆರ್ಜಿ, ಹೆಗ್ಗಳ, ಪೆರುಂಬಾಡಿ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.
