ಕುಶಾಲನಗರದಲ್ಲಿ ಅವಧಿ ಮೀರಿದ ಮದ್ಯ ನಾಶ
26/08/2020

ಮಡಿಕೇರಿ ಆ.26 : ಕುಶಾಲನಗರದಲ್ಲಿರುವ ಕರ್ನಾಟಕ ರಾಜ್ಯ ಪಾನೀಯ ನಿಗಮದ ಘಟಕದಲ್ಲಿ ಅವಧಿ ಮೀರಿದ ಮದ್ಯವನ್ನು ನಾಶಪಡಿಸುವ ಕಾರ್ಯ ನಡೆಯಿತು.
ಅವಧಿ ಮೀರಿ ಬಳಕೆಗೆ ಉಪಯುಕ್ತವಲ್ಲದ ಒಟ್ಟು 2086 ಬಾಕ್ಸ್ ವಿವಿಧ ಬ್ರಾಂಡ್‍ಗಳ ಬೀಯರ್ ಅನ್ನು ಗುಂಡಿಗೆ ಸುರಿದು ನಾಶಪಡಿಸಲಾಯಿತು.
ಈ ಸಂದರ್ಭ ಮಾತನಾಡಿದ ಉಪ ಅಧೀಕ್ಷಕರಾದ ಚೈತ್ರ, ಕೊರೊನ ಲಾಕ್‍ಡೌನ್ ಕಾರಣದಿಂದ ಸಾಕಷ್ಟು ಪ್ರಮಾಣದಲ್ಲಿ ಬಿಯರ್‍ಗಳು ಮಾರಾಟಗೊಂಡಿಲ್ಲ. ಒಟ್ಟು 36 ಲಕ್ಷ ಮೌಲ್ಯದ ಅವಧಿ ಮೀರಿದ ಬಿಯರ್ ಅನ್ನು ನಾಶಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ತಾಲೂಕು ಅಬಕಾರಿ ನಿರೀಕ್ಷಕರಾದ ಎಂ.ಪಿ.ಸಂಪತ್‍ಕುಮಾರ್, ಎ.ಮಂಜು, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ನಂದೀಶ್, ಘಟಕದ ವ್ಯವಸ್ಥಾಪಕ ವಿಠಲ್ ಕದಂ, ಲೆಕ್ಕಾಧಿಕಾರಿ ಪೀರ್ ಮೊಹಮ್ಮದ್ ಮತ್ತಿತರರು ಇದ್ದರು.