ನಂಜರಾಯಪಟ್ಟಣ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ದಾಂಧಲೆ

August 26, 2020

ಮಡಿಕೇರಿ ಆ.26 : ನಂಜರಾಯಪಟ್ಟಣ ಗ್ರಾ.ಪಂ ವ್ಯಾಪ್ತಿಯಲ್ಲಿ ಕಾಡಾನೆಗಳು ನುಗ್ಗಿ ಕೃಷಿ ತೋಟಗಳಿಗೆ ಹಾನಿ ಮಾಡಿದ ಬಗ್ಗೆ ವರದಿಯಾಗಿದೆ.
ಅಲ್ಲಿನ ಮೀನುಕೊಲ್ಲಿ ಅರಣ್ಯ ಭಾಗದಿಂದ ಗ್ರಾಮಕ್ಕೆ ಲಗ್ಗೆಯಿಡುತ್ತಿರುವ 4 ಕಾಡಾನೆಗಳ ಹಿಂಡು ಅಪಾರ ಪ್ರಮಾಣದಲ್ಲಿ ಬೆಳೆ ನಾಶ ಉಂಟು ಮಾಡುತ್ತಿದೆ ಎಂದು ಅಲ್ಲಿನ ರೈತರು ದೂರಿದ್ದಾರೆ. ಚಿನ್ನೂರು ಗ್ರಾಮದ ರೈತರಾದ ಸಿ.ಎಲ್.ವಿಶ್ವ, ನಡುಮನೆ ಭರತ್, ನಡುಮನೆ ಚಂಗಪ್ಪ ಮತ್ತು ಸುಬ್ರಾಯ ಎಂಬವರ ಭತ್ತದ ಗದ್ದೆಗೆ ದಾಳಿ ನಡೆಸಿದ ಕಾಡಾನೆಗಳ ಹಿಂಡು ಅಂದಾಜು 5 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಯನ್ನು ನಾಶಪಡಿಸಿವೆ.
ಅರಣ್ಯ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಂಡು ಕಾಡಾನೆಗಳ ಉಪಟಳವನ್ನು ಶಾಶ್ವತವಾಗಿ ನಿಯಂತ್ರಿಸುವಂತೆ ಕೃಷಿಕ ಸಿ.ಎಲ್.ವಿಶ್ವ ಪತ್ರಿಕೆ ಮೂಲಕ ಒತ್ತಾಯಿಸಿದ್ದಾರೆ.

error: Content is protected !!