ಸೇವಾ ಭಾರತಿ ತಂಡದಿಂದ ಮೃತಪಟ್ಟ ವೃದ್ಧೆಯ ಅಂತ್ಯಸಂಸ್ಕಾರ

August 26, 2020

ಮಡಿಕೇರಿ ಆ.26 : ಕೋವಿಡ್ ಸೋಂಕಿನಿಂದ ಮೃತಪಟ್ಟ ವೃದ್ಧೆಯ ಅಂತ್ಯಸಂಸ್ಕಾರವನ್ನು ಕುಶಾಲನಗರದ ಸೇವಾ ಭಾರತಿ ತಂಡದವರು ನೆರವೇರಿಸಿದರು. ಕುಶಾಲನಗರದ ಬೈಚನಹಳ್ಳಿಯ 77 ವರ್ಷದ ವೃದ್ದೆ ಅಧಿಕ ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿದ್ದರು. ಮಂಗಳವಾರ ಆರೋಗ್ಯ ಏರುಪೇರಾಗಿ ಕುಶಾಲನಗರ ಸರಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದರು. ಸರಕಾರಿ ಆಸ್ಪತ್ರೆಯಲ್ಲಿ ಆಂಟಿಜೆನ್ ಕಿಟ್ ಮೂಲಕ ಮೃತದೇಹದಲ್ಲಿ ಕೋವಿಡ್ ಪರೀಕ್ಷೆ ನಡೆಸಿದ ಸಂದರ್ಭ ಸೋಂಕು ತಗುಲಿರುವುದು ದೃಢಪಟ್ಟಿತ್ತು.
ಕೋವಿಡ್ ಮಾರ್ಗಸೂಚಿಯಂತೆ ಕುಶಾಲನಗರ ಸೇವಾ ಭಾರತಿ ಸಂಘಟನೆಯ ತಂಡದ ಸದಸ್ಯರು ನೆರವೇರಿಸಿದರು. ಸೇವಾ ಭಾರತಿಯ ತಂಡದಲ್ಲಿ ಕೆ.ಕೆ.ದಿನೇಶ್, ಜನಾರ್ಧನ್, ನವನೀತ್ ಪೊನ್ನೇಟಿ, ಭರತ್ ಮಾಚಯ್ಯ, ತನ್ಮಯ್ ಕಣಿವೆ, ಚಂದನ್ ಮತ್ತಿತರರು ಇದ್ದರು.

error: Content is protected !!