ಕುಂಬೂರು ಗ್ರಾಮದ ಯುವತಿ ನಾಪತ್ತೆ : ಮಾಹಿತಿ ನೀಡಲು ಸೋಮವಾರಪೇಟೆ ಪೊಲೀಸರ ಮನವಿ

26/08/2020

ಸೋಮವಾರಪೇಟೆ ಆ.26 : ಕುಂಬೂರು ಗ್ರಾಮದ ಯುವತಿಯೋರ್ವಳು ಕಾಣೆಯಾಗಿರುವ ಬಗ್ಗೆ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮದ ಸೌಮ್ಯ ಆ.21ರಂದು ಬೆಳಿಗ್ಗೆ 11 ಗಂಟೆಗೆ ಮನೆಯಿಂದ ಪಕ್ಕದ ಮನೆಗೆ ಹೋಗಿ ಬರುತ್ತೇನೆ ಎಂದು ತೆರಳಿದವಳು ವಾಪಾಸ್ಸು ಮನೆಗೆ ಬಂದಿಲ್ಲ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
ವಯಸ್ಸು 24, 5.3 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕನ್ನಡ, ಇಂಗ್ಲೀಷ್, ತುಳು ಮಾತನಾಡುತ್ತಾಳೆ. ಪತ್ತೆಯಾದಲ್ಲಿ ಸೋಮವಾರಪೇಟೆ ಪೊಲೀಸ್ ಠಾಣೆ(ದೂ.08276-282040)ಗೆ ಮಾಹಿತಿ ನೀಡುವಂತೆ ಠಾಣಾಧಿಕಾರಿ ಮನವಿ ಮಾಡಿದ್ದಾರೆ.