ಸೋಮವಾರಪೇಟೆ ಅಬಾಕಸ್ ಅಕಾಡೆಮಿ ವಿದ್ಯಾರ್ಥಿಗಳ ಸಾಧನೆ

26/08/2020

ಸೋಮವಾರಪೇಟೆ ಆ.26 : ಚೆನೈ ನ ಅಮಾತಾ ಟೀಚರ್ಸ್ ಅಸೋಸಿಯೇಷನ್ ವತಿಯಿಂದ ನಡೆದ ಅಂತಾರಾಷ್ಟ್ರೀಯ ಮಟ್ಟದ ಅಬಾಕಸ್ ಆನ್‍ಲೈನ್ ಸ್ಪರ್ಧೆಯಲ್ಲಿ ಪಟ್ಟಣದ ಅಬಾಕಸ್ ಅಕಾಡೆಮಿಯ ವಿದ್ಯಾರ್ಥಿಗಳಾದ ಅಭ್ಯುದಯ್ ಮತ್ತು ಯಶ್ವಿತ್ ಅವರುಗಳು ಚಾಂಪಿಯನ್ ಆಗಿದ್ದಾರೆ.
ಇಬ್ಬರು ವಿದ್ಯಾರ್ಥಿಗಳು 8 ನಿಮಿಷಗಳಲ್ಲಿ 100ಲೆಕ್ಕಗಳನ್ನು ಮುಗಿಸಿ ಪ್ರಶಸ್ತಿ ಗಳಿಸಿದ್ದಾರೆ. ಈಚೆಗೆ ಶಾಲೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿ ನವೀನ್ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು. ಅಬಾಕಸ್ ಶಿಕ್ಷಕಿ ಸುಕನ್ಯಾ, ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳ ಪೋಷಕರುಗಳಾದ ನಂದಿನಿ ಶರತ್, ಉಮೇಶ್ ಉಪಸ್ಥಿತರಿದ್ದರು.