ಸಂಸತ್ ಭವನದ ಬಳಿ ವ್ಯಕ್ತಿಯ ಬಂಧನ

August 27, 2020

ನವದೆಹಲಿ ಆ.27 : ದೆಹಲಿಯ ಸಂಸತ್ ಭವನದ ಬಳಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಜಮ್ಮು-ಕಾಶ್ಮೀರದ ವ್ಯಕ್ತಿಯೋರ್ವನನ್ನು ದೆಹಲಿಯ ಸಿಆರ್ ಪಿಎಫ್ ಪೆÇಲೀಸರು ಬಂಧಿಸಿದ್ದಾರೆ.
ವರದಿಗಳ ಪ್ರಕಾರ ಬಂಧಿತ ವ್ಯಕ್ತಿ ಜಮ್ಮು-ಕಾಶ್ಮೀರದ ಬದ್ಗಾಮ್ ಜಿಲ್ಲೆಯವನಾಗಿದ್ದಾನೆ. ಸಂಸತ್ ಭವನದ ಎದುರು ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಹಿನ್ನೆಲೆಯಲ್ಲಿ ಆತನನ್ನು ಕರ್ತವ್ಯ ನಿರತ ಸಿಆರ್ ಪಿಎಫ್ ಸಿಬ್ಬಂದಿ ಬಂಧಿಸಿದ್ದಾರೆ.
ಪ್ರಾಥಮಿಕ ವಿಚಾರಣೆ ವೇಳೆ ಪೆÇಲೀಸರಿಗೆ ಈ ವ್ಯಕ್ತಿ ತನ್ನ ಬಗ್ಗೆ ದಾರಿ ತಪ್ಪಿಸುವ ಮಾಹಿತಿ ನೀಡಿದ್ದಾನೆ. ಆತನಿಂದ ವಶಪಡಿಸಿಕೊಂಡ ವಸ್ತುಗಳ ಪೈಕಿ ಕೋಡ್ ವರ್ಡ್ ಗಳನ್ನು ಹೊಂದಿದ ಮಾಹಿತಿಯೊಂದು ಲಭ್ಯವಾಗಿದೆ. ಬಂಧಿತ ವ್ಯಕ್ತಿಯಿಂದ ಎರಡು ಐಡಿ ಕಾರ್ಡ್‍ಗಳು, ಒಂದು ಆಧಾರ್ ಕಾರ್ಡ್ ಹಾಗೂ ವಾಹನ ಚಾಲನೆ ಪರವಾನಗಿಯನ್ನೂ ವಶಪಡಿಸಿಕೊಳ್ಳಲಾಗಿದೆ.

error: Content is protected !!