ಎಸ್.ಪಿ.ಬಾಲಸುಬ್ರಹ್ಮಣ್ಯಂ ಚೇತರಿಕೆ
27/08/2020

ಚೆನ್ನೈ ಆ.27 : ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದ ಬಗ್ಗೆ ಅವರ ಪುತ್ರ ಎಸ್ ಪಿ ಬಿ ಚರಣ್ ಮಾಹಿತಿ ನೀಡಿದ್ದು, ಎಸ್ ಪಿಬಿ ಚೇತರಿಸಿಕೊಳ್ಳುತ್ತಿರುವುದನ್ನು ತಿಳಿಸಿದ್ದಾರೆ.
ವೈದ್ಯರೊಂದಿಗೆ ಮಾತನಾಡಿದೆ, ನಮ್ಮ ತಂದೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಸೆಡೆಶನ್ ನಿಂದ ಶೇ.90 ರಷ್ಟು ಹೊರಬಂದಿದ್ದಾರೆ. ಚೇತರಿಸಿಕೊಳ್ಳುತ್ತಿದ್ದಾರೆ. ವೈದ್ಯರು ಹಾಗೂ ಚಿಕಿತ್ಸೆಗೆ ಅವರು ಸ್ಪಂದಿಸುತ್ತಿದ್ದಾರೆ. ನಮ್ಮ ತಂದೆಯ ಆರೋಗ್ಯ ಚೇತರಿಕೆಗೆ ಪ್ರಾರ್ಥಿಸಿದ ಎಲ್ಲರ ಪ್ರೀತಿ, ಪ್ರಾರ್ಥನೆಗಳಿಗೆ, ಎಂಜಿಎಂ ಆಸ್ಪತ್ರೆಯ ತಂಡಕ್ಕೆ ನಮ್ಮ ಕುಟುಂಬ ಕೃತಜ್ಞರಾಗಿದೆ ಎಂದು ಚರಣ್ ತಿಳಿಸಿದ್ದಾರೆ. ಗುಣಮುಖರಾಗಿರುವ ನಮ್ಮ ತಂದೆಯನ್ನು ನಾವು ಆದಷ್ಟು ಬೇಗ ನೋಡುತ್ತೇವೆ ಎಂಬ ವಿಶ್ವಾಸವಿದೆ, ಅವರು ಚೇತರಿಸಿಕೊಳ್ಳುತ್ತಿರುವ ಸುದ್ದಿ ಬಂದಿದ್ದು ಅವರ ಆರೋಗ್ಯದ ಬಗ್ಗೆ ಕಳಕಳಿ ಹೊಂದಿದ್ದ ಎಲ್ಲರಿಗೂ ಇದು ಸುದಿನ ಎಂದು ಚರಣ್ ಹೇಳಿದ್ದಾರೆ.
