ಕುಶಾಲನಗರದ ಪೃಥ್ವಿ ಜುವೆಲ್ಲರಿಯಿಂದ ಜೀವನದಾರಿ ಆಶ್ರಮದ ವಯೋವೃದ್ಧರಿಗೆ ಹಣ್ಣು ಹಂಪಲು ವಿತರಣೆ

27/08/2020

ಮಡಿಕೇರಿ ಆ. 27 : ಕುಶಾಲನಗರದ ಪೃಥ್ವಿ ಜುವೆಲ್ಲರಿ ವತಿಯಿಂದ ವಿಕಾಸ್ ಜನ ಸೇವಾ ಟ್ರಸ್ಟ್
ಜೀವನದಾರಿ ಆಶ್ರಮದ ವಯೋವೃದ್ಧರಿಗೆ ಉಪಹಾರ ಮತ್ತು ಹಣ್ಣು ಹಂಪಲನ್ನು ವಿತರಿಸಲಾಯಿತು.
ಆಶ್ರಮಕ್ಕೆ ಅಗತ್ಯ ನೆರವು ನೀಡಲಾಗುವುದೆಂದು ಸಂಸ್ಥೆಯ ಪ್ರಮುಖರು ಇದೇ ಸಂದರ್ಭ ಭರವಸೆ ನೀಡಿದರು.
ವಿಕಾಸ್ ಜನ ಸೇವಾ ಟ್ರಸ್ಟ್ ಅಧ್ಯಕ್ಷ ಹೆಚ್.ಎಸ್.ರಮೇಶ್ ಮಾತನಾಡಿ ಸುಮಾರು 40 ವಯೋವೃದ್ಧರು ಆಶ್ರಮದಲ್ಲಿ ಆಶ್ರಯ ಪಡೆದಿದ್ದು, ದಾನಿಗಳ ಸಹಕಾರದಿಂದ ಅನಾಥರ ಸೇವೆ ನಡೆಯುತ್ತಿದೆ ಎಂದರು.