ಶಕ್ತಿ ಪ್ರತಿಷ್ಠಾನದಿಂದ ವಿರಾಜಪೇಟೆ ಖಾಸಗಿ ಬಸ್ ಕಾರ್ಮಿಕರ ಸಂಘಕ್ಕೆ ನೆರವು
27/08/2020

ಮಡಿಕೇರಿ ಆ. 27 : ಶಕ್ತಿ ಪ್ರತಿಷ್ಠಾನದ ವತಿಯಿಂದ ವಿರಾಜಪೇಟೆ ಕೊಡಗು ಖಾಸಗಿ ಬಸ್ಸು ಕಾರ್ಮಿಕರ ಸಂಘಕ್ಕೆ ಐವತ್ತು ಸಾವಿರ ರೂ.ಗಳ ಚೆಕ್ ವಿತರಿಸಲಾಯಿತು.
ಕಳೆದ ಆರು ತಿಂಗಳಿಂದ ಕೊರೋನಾ ಮಹಾಮಾರಿಯ ಸಲುವಾಗಿ ಕೊಡಗಿನಾದ್ಯಾಂತ ಎಲ್ಲಾ ಖಾಸಗಿ ಬಸ್ಸುಗಳು ಸಂಚಾರವನ್ನು ಸ್ಥಗಿತಗೊಳಿಸಿದ್ದವು. ಇದರಿಂದಾಗಿ ಖಾಸಗಿ ಬಸ್ಸಿನಲ್ಲಿ ಕಾರ್ಮಿಕರಾಗಿ ದುಡಿಯುವ ಎಲ್ಲರೂ ಸಂಕಷ್ಟಕ್ಕಿಡಾಗಿದ್ದು, ಇದನ್ನು ಮನಗಂಡ ಶಕ್ತಿ ಪ್ರತಿಷ್ಟಾನದ ಮುಖ್ಯಸ್ಥ ಹಾಗೂ ಶಕ್ತಿ ಪತ್ರಿಕೆಯ ಸಂಪಾದಕರಾದ ರಾಜೇಂದ್ರ ಅವರು ಕೊಡಗು ಖಾಸಗಿ ಬಸ್ಸು ಕಾರ್ಮಿಕರ ಸಂಘದ ಅಧ್ಯಕ್ಷ ದಿನೇಶ್ ನಾಯರ್ ಅವರಿಗೆ ಶಕ್ತಿ ಕಾರ್ಯಾಲಯದಲ್ಲಿ ಚೆಕ್ ವಿತರಿಸಿದರು.
ಸಮಸ್ಯೆಗಳನ್ನು ಆಲಿಸಿದ ರಾಜೇಂದ್ರ, ಮುಂದಿನ ದಿನಗಳಲ್ಲಿಯೂ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಪ್ರತಿಷ್ಠಾನದ ಪ್ರಮುಖರಾದ ಪ್ರಜ್ಞಾ, ಪ್ರಜ್ವಲ್ ಹಾಗೂ ಮತ್ತಿತರರು ಇದ್ದರು.
