ಸುಂಟಿಕೊಪ್ಪ ಗೌರಿಗಣೇಶೋತ್ಸವ ಸಮಿತಿಯಿಂದ ಗಣೇಶ ಮೂರ್ತಿಗಳ ವಿಸರ್ಜನೋತ್ಸವ

27/08/2020

ಸುಂಟಿಕೊಪ್ಪ,ಆ.26: ವಿಶ್ವ ಹಿಂದೂ ಪರಿಷತ್ ಮತ್ತು ಗೌರಿಗಣೇಶೋತ್ಸವ ಸಮಿತಿ ವತಿಯಿಂದ 56ನೇ ವರ್ಷದ ಶ್ರೀ ಕೋದಂಡರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಗೌರಿ ಗಣೇಶ ಮೂರ್ತಿಗಳನ್ನು 5 ದಿನಗಳ ಕಾಲ ಪೂಜೆ ಸಲ್ಲಿಸಿ ವಿಸರ್ಜನೋತ್ಸವವನ್ನು ಸರಳವಾಗಿ ನಡೆಸಲಾಯಿತು.
ಶ್ರೀ ಗೌರಿ ಶ್ರೀ ಗಣೇಶೋತ್ಸವದ ಅಂಗವಾಗಿ ಶ್ರೀ ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾದ ಶ್ರೀ ಗೌರಿ ಗಣೇಶ ಮೂರ್ತಿಗಳಿಗೆ ಬೆಳಿಗ್ಗೆ ಗಣಹೋಮ, 11 ಗಂಟೆಗೆ ಮಹಾಪೂಜೆ ಮಹಾ ಮಂಗಳಾರತಿಯೊಂದಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ಭವ್ಯ ಮಂಟಪದಲ್ಲಿ ಸುಂಟಿಕೊಪ್ಪ ನಗರದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ತೆರಳಿ ಅಂಗಡಿ ಮಾಲಿಕರು ಸಾರ್ವಜನಿಕರು ಪೂಜೆ ಸಲ್ಲಿಸಿ ಈಡುಗಾಯಿ ಹೊಡೆದು ಗಣಪನಿಗೆ ಹರಕೆ ಆರ್ಪಿಸಿದರು. ಗದ್ದೆಹಳ್ಳದ ಯಂಕನ ಉಲ್ಲಾಸ್ ಮತ್ತು ಯಂಕನ ಕರುಂಬಯ್ಯ ಅವರ ಕೆರೆಯಲ್ಲಿ ಶ್ರೀ ಗೌರಿ ಗಣೇಶನ ಉತ್ಸವ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಅರ್ಚಕರಾದ ದರ್ಶನ್ ಭಟ್, ಮನೋಜ್ ಭಟ್ ಪೂಜಾ ವಿಧಿ ವಿಧಾನ ನರವೇರಿಸಿದರು.
ಈ ಸಂದರ್ಭ ಗೌರಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಿ.ಎಂ.ಸುರೇಶ್, ಪಿ.ಲೋಕೇಶ್ ಎಂ.ಆರ್.ಶಶಿ, ಎಸ್.ರವಿ, ಕಾರ್ಯದರ್ಶಿ ಸುರೇಶ್ ಗೋಪಿ, ಟಿ.ಕೆ.ರಾಕೇಶ್, ಧನುಕಾವೇರಪ್ಪ, ಪಿ.ಆರ್.ಸುನಿಲ್ ಕುಮಾರ್, ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಎ.ಶ್ರೀಧರ್ ಕುಮಾರ್, ಕೆ.ಪ್ರಕಾಶ್, ಅರುಣ್‍ಕುಮಾರ್, ಮಧು, ಬಿ.ವಿ.ತೇಜಸ್, ಎಸ್.ಪೃಥ್ವಿರಾಜ್, ಎಸ್.ರವಿ, ಎಂ.ಆರ್.ಶಶಿಕುಮಾರ್, ಎಂ.ಎಸ್.ಸುನಿಲ್ ಪಿ.ಆರ್.ಸುನಿಲ್‍ಕುಮಾರ್, ಹಾಗೂ ಬಿ.ಕೆ.ಪ್ರಶಾಂತ್(ಕೊಕ) ಹಿರಿಯರಾದ ಎಂ.ಎ.ವಸಂತ ಇತರರು ಇದ್ದರು.