ಮಡಿಕೇರಿಯಲ್ಲಿ ಸಧ್ಯದಲ್ಲೇ ಭಾರತೀಯ ಜನ ಔಷಧಿ ಕೇಂದ್ರ ಪ್ರಾರಂಭ

27/08/2020

ಮಡಿಕೇರಿ ಆ. 27 : ಮಡಿಕೇರಿ ನಗರ ಮತ್ತು ಸುತ್ತಮುತಲ ಪ್ರದೇಶದಲ್ಲಿ ಬಹುಕಾಲದಿಂದ ಬೇಡಿಕೆಯಲ್ಲಿದ್ದ ಪ್ರಧಾನಮಂತ್ರಿ ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ಮಡಿಕೇರಿಯಲ್ಲಿ ಸದ್ಯದಲ್ಲೆ ಪ್ರಾರಂಭವಾಗಲಿದೆ.
ಮಡಿಕೇರಿಯವರೇ ಆದ, ಕೆ.ಕೆ.ದಿನೇಶ್ ಕುಮಾರ್ ಅವರ ನೇತೃತ್ವದಲ್ಲಿ ಈ ಮಳಿಗೆ ಪ್ರಧಾನ ಅಂಚೆ ಕಚೇರಿಯ ಬಳಿಯಿರುವ ನಾರ್ತ್ ಕೂರ್ಗ್ ಕ್ಲಬ್, ಶಾಪಿಂಗ್ ಕಾಂಪ್ಲೆಕ್ಸ್‌ನ ಮೂರನೇ ಮಳಿಗೆಯಲ್ಲಿ ಆರಂಭವಾಗಲಿದ್ದು, ಪ್ರಧಾನಿ ಮಂತ್ರಿಗಳ ಆಶಯದಂತೆ ಬಡವರಿಗೆ ಎಟುಕುವ ಬೆಲೆಯಲ್ಲಿ ಔಷಧಿಗಳು ಲಭ್ಯವಿರುವಂತಾಗಬೇಕು. ಔಷಧಿಗಳು ಸಿಗಲಿಲ್ಲ ಅಥವಾ ಔಷಧಿ ಕೊರತೆಯಿಂದಾಗಿ ಬಡವರು ಪ್ರಾಣ ಕಳೆದುಕೊಳ್ಳುವಂತೆ ಆಗಬಾರದು, ಅದಕ್ಕಾಗಿ ದೇಶದಾದ್ಯಂತ ಜನ ಔಷಧಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಸರಣಿಯಲ್ಲಿ ಮಡಿಕೇರಿ ಕೂಡ ಶೀಘ್ರವೇ ಸೇರ್ಪಡೆಯಾಗಲಿದ್ದು, ಸರ್ವರು ಈ ಕೇಂದ್ರದ ಸದುಪಯೋಗ ಪಡೆದುಕೊಳ್ಳುವಂತೆ ದಿನೇಶ್ ಕುಮಾರ್ ಪ್ರಕಟಣೆಯಲ್ಲಿ ಕೋರಿದ್ದಾರೆ.