ಕೊಡಗಿನಲ್ಲಿ 6 ವರ್ಷದ ಮಕ್ಕಳನ್ನು ಕಾಡಿದ ಕೋವಿಡ್

28/08/2020

ಮಡಿಕೇರಿ ಆ. 28 : ಕೊಡಗು ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲೇ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕುಂದಚೇರಿ ಗ್ರಾಮದ ಚೆಟ್ಟಿಮಾನಿ‌ ಪಂಚಾಯಿತಿ ಬಳಿಯ 6 ವರ್ಷದ ಬಾಲಕ ಮತ್ತು ಹಾಕತ್ತೂರು ಗ್ರಾ.ಪಂ ವ್ಯಾಪ್ತಿಯ ತೊಂಭತ್ತು ಮನೆ ಗ್ರಾಮದ 6 ಹಾಗೂ 16 ವರ್ಷದ ಬಾಲಕರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.
ಇಂದು ಬೆಳಗ್ಗೆ ಬಂದ ವರದಿಯಿಂದ ಮಕ್ಕಳಲ್ಲಿ ಕೋವಿಡ್ ಇರುವುದು ದೃಢಪಟ್ಟಿದ್ದು, ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿಯ ಕುಂದಚೇರಿ ಗ್ರಾಮದ ಚೆಟ್ಟಿಮಾನಿಯ ಪಂಚಾಯತ್ ಕಚೇರಿ ಬಳಿಯ 19 ವರ್ಷದ ಮಹಿಳೆ, 6 ವರ್ಷದ ಬಾಲಕ ಮತ್ತು 30 ವರ್ಷದ ಪುರುಷ.
ಮಡಿಕೇರಿ ಹಾಕತ್ತೂರು ಗ್ರಾಮದ ಹರತಾಳ ರಸ್ತೆಯ 73 ವರ್ಷದ ಪುರುಷ.
ಮಡಿಕೇರಿ ಹಾಕತ್ತೂರು ಗ್ರಾಮದ ತೊಂಬತ್ತುಮನೆಯ 16, 9 ವರ್ಷದ ಬಾಲಕರು, 6 ವರ್ಷದ ಬಾಲಕಿ, 13 ವರ್ಷದ ಬಾಲಕ, 73, 41 ಮತ್ತು 34 ವರ್ಷದ ಮಹಿಳೆಯರು.
ಮೂರ್ನಾಡು ಅಂಚೆಯ ಕಾಂತೂರು ಗ್ರಾಮದ 53 ವರ್ಷದ ಮಹಿಳೆ.
ಸುಂಟಿಕೊಪ್ಪ ಚೆಟ್ಟಳ್ಳಿ ರಸ್ತೆಯ ಶ್ರೀದೇವಿ ಲೇಔಟಿನ 22 ಮತ್ತು 65 ವರ್ಷದ ಮಹಿಳೆಯರು.
ಮಡಿಕೇರಿ ಹಾಕತ್ತೂರಿನ ಚೂರಿಕಾಡುವಿನ 46 ವರ್ಷದ ಪುರುಷ.
ಕುಶಾಲನಗರ ಮಾರ್ಕೆಟ್ ರಸ್ತೆಯ 34 ವರ್ಷದ ಮಹಿಳೆ.
ಮಡಿಕೇರಿ ರಾಘವೇಂದ್ರ ದೇವಾಲಯ ಬಳಿಯ 70 ಮತ್ತು 35 ವರ್ಷದ ಪುರಷರು.
ಮಡಿಕೇರಿ ಅಶೋಕಪುರಂನ ಬ್ಲಾಕ್ ನಂಬರ್ 19ರ 45 ವರ್ಷದ ಪುರುಷ.
ಹಾಸನದ ಅರಕಲಗೂಡುವಿನ 55 ವರ್ಷದ ಪುರುಷ.
ಗೋಣಿಕೊಪ್ಪ ಸೀಗೆತೋಡುವಿನ 33 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1310 ಆಗಿದ್ದು, 1074 ಮಂದಿ ಗುಣಮುಖರಾಗಿದ್ದಾರೆ. 218 ಸಕ್ರಿಯ ಪ್ರಕರಣಗಳಿದ್ದು, 18 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 197 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.