2 ಕ್ವಿಂಟಾಲ್ ಗಾಂಜಾ ವಶ

28/08/2020

ಬೆಂಗಳೂರು ಆ.28 : ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೆÇಲೀಸರು ಸುಮಾರು 1 ಕೋಟಿ ಮೌಲ್ಯದ 2 ಕ್ವಿಂಟಾಲ್ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಇದು ಸಿಸಿಬಿ ಪೊಲೀಸರು ಇತಿಹಾಸದಲ್ಲಿಯೇ ದಾಖಲೆ ಪ್ರಮಾಣದ ಗಾಂಜಾ ವಶಪಡಿಸಿಕೊಂಡ ಪ್ರಕರಣವಾಗಿದೆ.
ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಕೈಸರ್ ಪಾಷಾ (41), ಮೈಸೂರಿನ ಎನ್ ಆರ್ ಪುರದ ಸಮೀರ್(37) ಹಾಗೂ ಚಿಕ್ಕ ಬಳ್ಳಾಪುರದ ಉದಗೂರಿನ ಇಸ್ಮಾಯಿಲ್ ಷರೀಫ್(38) ಬಂಧಿತ ಆರೋಪಿಗಳು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಬಂಧಿತ ಆರೋಪಿ ಗಳಿಂದ 1ಕೋಟಿ ಮೌಲ್ಯದ 204 ಕೆಜಿ ಗಾಂಜಾ 1ಲಾರಿ, 1 ಕಾರು, 3 ಮೊಬೈಲ್ ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.