ಮೊಹರಂ ಮೆರವಣಿಗೆಗೆ ಅನುಮತಿ ಇಲ್ಲ

28/08/2020

ನವದೆಹಲಿ ಆ.28 : ದೇಶಾದ್ಯಂತ ಮೊಹರಂ ಮೆರವಣಿಗೆಗೆ ಅನುಮತಿ ನೀಡುವುದಕ್ಕೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಕೊರೋನಾ ಕಾರಣದಿಂದಾಗಿ ಸುಪ್ರೀಂ ಕೋರ್ಟ್ ಮೆರವಣಿಗೆಗೆ ಅನುಮತಿ ನೀಡುವುದಕ್ಕೆ ನಿರಾಕರಿಸಿದೆ.
ಅರ್ಜಿ ಸಲ್ಲಿಸಿದ್ದ ಲಖನೌ ಮೂಲದ ಅರ್ಜಿದಾರನಿಗೆ ಅಲ್ಲಹಾಬಾದ್ ಹೈಕೋರ್ಟ್ ಗೆ ಹೋಗುವಂತೆ ಸುಪ್ರೀಂ ಕೋರ್ಟ್ ತಿಳಿಸಿದೆ.
ಇಡೀ ದೇಶಕ್ಕೆ ಸಾಮಾನ್ಯವಾದ ಆದೇಶವನ್ನು ನೀಡುವುದಕ್ಕೆ ಹೇಗೆ ಸಾಧ್ಯ ಎಂದು ಸುಪ್ರೀಂ ಕೋರ್ಟ್ ಕೇಳಿದೆ.
ನ್ಯಾ.ಎಸ್‍ಎ ಬೋಬ್ಡೆ ಹಾಗೂ ನ್ಯಾ.ಎಎಸ್ ಬೋಪಣ್ಣ, ನ್ಯಾ. ವಿ ಸುಬ್ರಹ್ಮಣಿಯನ್ ಅವರಿದ್ದ ಪೀಠ ಅವ್ಯವಸ್ಥೆ ಉಂಟಾಗಿ, ನಿರ್ದಿಷ್ಟವಾದ ಮತವನ್ನು ಟಾರ್ಗೆಟ್ ಮಾಡುವಂತೆ ಆಗಲಿದೆ ಎಂದು ಹೇಳಿದೆ.
ನೀವು ದೇಶಕ್ಕೆಲ್ಲಾ ಒಂದೇ ಆದೇಶವನ್ನು ನೀಡುವುದಕ್ಕೆ ಕೇಳುತ್ತಿದ್ದೀರಿ ಹಾಗಾದರೆ ಅದರಿಂದ ಅವ್ಯವಸ್ಥೆ ಉಂಟಾಗಲಿದೆ, ಕೋವಿಡ್-19 ಹರಡುವಿಕೆಗೆ ನಿರ್ದಿಷ್ಟ ಸಮುದಾಯದವರು ದೂಷಿಸಲ್ಪಡುತ್ತಾರೆ. ಅದು ಆಗಬಾರದು, ನ್ಯಾಯಾಲಯವಾಗಿದ್ದುಕೊಂಡು ಜನರ ಆರೋಗ್ಯದಲ್ಲಿ ಅಪಾಯವನ್ನು ಆಹ್ವಾನಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.