ಕೊಡಗು ದಪ್ ಸಮಿತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

August 28, 2020

ಮಡಿಕೇರಿ ಆ. 28 : ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಕೊಡಗು ದಪ್ ಸಮಿತಿ ವತಿಯಿಂದ ನಗದು ಬಹುಮಾನ ಹಾಗೂ ಪ್ರಶಸ್ತಿಯನ್ನು ನೀಡಲಾಯಿತು.
ವಿರಾಜಪೇಟೆಯ ಎನ್‍ಸಿಟಿ ಟೂರಿಸ್ಟ್ ಆಂಡ್ ಟ್ರವಲ್ಸ್‍ನಲ್ಲಿ ಮಾಪಿಳೆತ್ತೋಡ್ ಮೂಸೆಕ್ಕ ಅವರ ವಿಶೇಷ ಆಸಕ್ತಿಯಿಂದ ದಾನಿಗಳ ನೆರವಿನಿಂದ ರಾಜ್ಯ ಪ್ರಶಸ್ತಿಯನ್ನು ಪಡೆದ ಎಡಪಾಲ ಗ್ರಾಮದ ನಿವೃತ್ತ ಅಧ್ಯಾಪಕರಾದ ಉಮ್ಮರ್ ಮಾಸ್ಟರ್ ಅವರ ಸಮ್ಮುಖದಲ್ಲಿ ನೀಡಲಾಯಿತು.

ಸಮಿತಿಯ ಅಧ್ಯಕ್ಷ ಆಲಿರ ರಷೀದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸರಳ ಕಾರ್ಯಕ್ರಮವನ್ನು ಎಮ್ಮೆಮಾಡುವಿನ ಅಶ್ರಪ್ ಅವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಉಮ್ಮರ್ ಮಾಸ್ಟರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಸಮಿತಿಯ ಗೌರವ ಅಧ್ಯಕ್ಷ ಅಕ್ಕಳತಂಡ ಮೊಯಿದು, ಉಪಾದ್ಯಕ್ಷ ಜುಬೈರ್ ಕಡಂಗ, ಖಜಾಂಚಿ ಬಷೀರ್, ಮಾಜಿ ಸೈನಿಕ ಅಶ್ರಪ್ ವಯಕ್ಕೋಲ್, ಸಹಕಾರ್ಯದರ್ಶಿ ತೌಸೀಪ್ ಅಮ್ಮತ್ತಿ ಹಾಗೂ ವಿದ್ಯಾರ್ಥಿಗಳು ಪೆÇೀಷಕರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಮೊದಲಿಗೆ ಜುಬೈರ್ ಮುಸ್ಲಿಯಾರ್ ಪ್ರಾರ್ಥಿಸಿದರು. ಸ್ಥಾಪಕ ಅಧ್ಯಕ್ಷ ಮಜೀದ್ ಚೋಕಂಡಳ್ಳಿ ಸ್ವಾಗತಿಸಿ, ದೇವಣಗೇರಿಯ ಅಬ್ಬಾಸ್ ಝೈನಿ ವಂದಿಸಿದರು. ಸ್ವಲಾತಿನೊಂದೀಗೆ ಕಾರ್ಯಕ್ರಮವನ್ನು ಮುಖ್ತಾಯಗೊಳಿಸಲಾಯಿತು.

error: Content is protected !!