ಗುತ್ತಿಗೆದಾರ ಸೋಮವಾರಪೇಟೆಯ ಎಂ.ಎಂ.ಸುರೇಶ್ ನಿಧನ

28/08/2020

ಸೋಮವಾರಪೇಟೆ ಆ.28 : ಸೋಮವಾರಪೇಟೆಯ ಮಾಟ್ನಳ್ಳಿ ಗ್ರಾಮದ ನಿವಾಸಿ, ಲೋಕೋಪಯೋಗಿ ಇಲಾಖೆಯ ಪ್ರಥಮ ದರ್ಜೆ ಗುತ್ತಿಗೆದಾರ ಎಂ.ಎಂ. ಸುರೇಶ್(45) ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ತಂದೆ, ತಾಯಿ, ಪತ್ನಿ ಹಾಗು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಸ್ವ ಗ್ರಾಮದಲ್ಲಿ ನಡೆಯಿತು.