ಚೆಟ್ಟಿಮಾನಿ ಗ್ರಾಮದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಸೆರೆ
28/08/2020

ಮಡಿಕೇರಿ ಆ.28 : ಚೆಟ್ಟಿಮಾನಿ ಗ್ರಾಮದ ಕೆದಂಬಾಡಿ ಉದಯಕುಮಾರ್ ಹಾಗೂ ಋಷಿ ಕುಮಾರ್ ಅವರ ತೋಟದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದೆ. ಗ್ರಾಮಸ್ಥರ ಸಹಕಾರದಿಂದ ಉದಯಕುಮಾರ್ ಅವರು ಹಾವನ್ನು ಹಿಡಿದು ಅರಣ್ಯ ಸಿಬ್ಬಂದಿಗಳಿಗೆ ಒಪ್ಪಿಸಿದ್ದಾರೆ.