ಕೊಡಗಿನಲ್ಲಿ ಎರಡು ವರ್ಷದ ಬಾಲಕನನ್ನು ಕಾಡಿದ ಕೊವೀಡ್ ಸೋಂಕು

ಮಡಿಕೇರಿ ಆ. 29 : ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ 8 ಗಂಟೆ ವೇಳೆಗೆ 23 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ.
ಮಡಿಕೇರಿ ರಾಘವೇಂದ್ರ ದೇವಾಲಯ ಬಳಿಯ 68 ವರ್ಷದ ಪುರುಷ ಮತ್ತು 31 ವರ್ಷದ ಮಹಿಳೆ.
ಸೋಮವಾರಪೇಟೆ ತಾಲೂಕಿನ ಗರಗಂದೂರು ಸೇತುವೆ ಬಳಿಯ 34 ವರ್ಷದ ಮಹಿಳೆ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ರಿಮಾಂಡ್ ಹೋಮ್ ಬಳಿಯ 28 ಮತ್ತು 57 ವರ್ಷದ ಪುರುಷರು.
ಸೋಮವಾರಪೇಟೆ ಗರ್ವಾಲೆ ಗ್ರಾಮ ಮತ್ತು ಅಂಚೆಯ 34 ವರ್ಷದ ಪುರುಷ.
ಮಡಿಕೇರಿ ಮುತ್ತಪ್ಪ ದೇವಾಲಯ ಬಳಿಯ 62 ವರ್ಷದ ಮಹಿಳೆ, 29 ಮತ್ತು 70 ವರ್ಷದ ಪುರುಷರು.
ಸೋಮವಾರಪೇಟೆ ಕೊಡ್ಲಿಪೇಟೆಯ ಕಿರ್ಕೋಡ್ಲಿ ಗ್ರಾಮದ 60 ವರ್ಷದ ಪುರುಷ.
ದೇಚೂರಿನ ಆಂಜನೇಯ ಕಟ್ಟೆಯ 36 ವರ್ಷದ ಪುರುಷ.
ಸೋಮವಾರಪೇಟೆ ತೋಳೂರುಶೆಟ್ಟಳ್ಳಿಯ 16 ವರ್ಷದ ಬಾಲಕ.
ದಕ್ಷಿಣ ಕನ್ನಡ ಸುಳ್ಯದ 33 ವರ್ಷದ ಪುರುಷ.
ಮೂರ್ನಾಡುವಿನ ಗಾಂಧೀನಗರದ 26 ವರ್ಷದ ಮಹಿಳೆ.
ವಿರಾಜಪೇಟೆ ನೆಹರು ನಗರದ ಮಸೀದಿ ಬಳಿಯ 33 ವರ್ಷದ ಪುರುಷ, 7ಮತ್ತು 2 ವರ್ಷದ ಬಾಲಕ ಹಾಗೂ 49 ವರ್ಷದ ಮಹಿಳೆ.
ಕುಶಾಲನಗರ ನಾಗೇಗೌಡ ಬಡಾವಣೆಯ ಬಲಮುರಿ ದೇವಾಲಯ ಹಿಂಭಾಗದ 42 ವರ್ಷದ ಮಹಿಳೆ.
ವಿರಾಜಪೇಟೆ ವಿದ್ಯಾನಗರದ 58 ಮತ್ತು 80 ವರ್ಷದ ಮಹಿಳೆಯರು.
ವಿರಾಜಪೇಟೆ ನಿಸರ್ಗ ಲೇಔಟಿನ 32 ವರ್ಷದ ಮಹಿಳೆ ಮತ್ತು 8 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1365 ಆಗಿದ್ದು, 1098 ಮಂದಿ ಗುಣಮುಖರಾಗಿದ್ದಾರೆ. 248 ಸಕ್ರಿಯ ಪ್ರಕರಣಗಳಿದ್ದು, 19 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 215 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
