ಸೇನೆ ದಾಳಿಗೆ 4 ಉಗ್ರರು ಬಲಿ
29/08/2020

ಶ್ರೀನಗರ ಆ.29 : ಜಮ್ಮು ಮತ್ತು ಕಾಶ್ಮೀರದ ಖಾನ್ಮೋಹ್ ಸರಪಂಚ್ ನ್ನು ಅಪಹರಿಸಿ ಹತ್ಯೆಗೈದಿದ್ದ ಉಗ್ರ ಸುಹೈಲ್ ಭಟ್ ಸೇರಿದಂತೆ ನಾಲ್ವರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಯೋಧರು ಕಾರ್ಯಾಚರಣೆ ನಡೆಸಿ ನಾಲ್ವರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಇನ್ನು ಜೀವಭಯದಿಂದ ಉಗ್ರನೋರ್ವ ಶರಣಾಗಿದ್ದಾನೆ.
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಕಿಲೂರಾದಲ್ಲಿ ಭಾರತೀಯ ಯೋಧರು ಉಗ್ರ ನಿಗ್ರಹ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಅಲ್ ಬದ್ರ್ ಜಿಲ್ಲಾ ಕಮಾಂಡರ್ ಶಕೂರ್ ಪ್ಯಾರೆಯನ್ನು ಹತ್ಯೆಗೈಯಲಾಗಿದೆ ಎಂದು ಕಾಶ್ಮೀರ ಐಜಿಪಿ ತಿಳಿಸಿದ್ದಾರೆ.
