ಅಧಿವೇಶನಕ್ಕೂ ಮೊದಲು ಕೊರೋನಾ ಟೆಸ್ಟ್

29/08/2020

ನವದೆಹಲಿ ಆ.29 : ಸಂಸತ್ ಮುಂಗಾರು ಅಧಿವೇಶನ ಆರಂಭವಾಗು ಕನಿಷ್ಠ 72 ಗಂಟೆಗಳ ಮುನ್ನ ಎಲ್ಲಾ ಸಂಸದರು ಕೊರೋನಾ ಟೆಸ್ಟ್ ಮಾಡಿಸಬೇಕು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಶುಕ್ರವಾರ ಮನವಿ ಮಾಡಿದ್ದಾರೆ.
ಮುಂಗಾರು ಅಧಿವೇಶನವು ಸೆ.14 ರಿಂದ ಪ್ರಾರಂಭವಾಗಿ ಅ.1 ರಂದು ಮುಕ್ತಾಯಗೊಳ್ಳುವ ಸಾಧ್ಯತೆಯಿದೆ.
ಸಂಸದರಲ್ಲದೆ, ಸಚಿವಾಲಯಗಳ ಅಧಿಕಾರಿಗಳು, ಮಾಧ್ಯಮಗಳ ಪ್ರತಿನಿಧಿಗಳು ಮತ್ತು ಲೋಕಸಭೆ ಮತ್ತು ರಾಜ್ಯಸಭಾ ಕಾರ್ಯದರ್ಶಿಗಳ ಸಿಬ್ಬಂದಿ ಸೇರಿದಂತೆ ಸಂಸತ್ತಿನ ಆವರಣ ಪ್ರವೇಶಿಸುವ ನಿರೀಕ್ಷೆಯಿರುವವರೆಲ್ಲರೂ ಅಧಿವೇಶನ ಪ್ರಾರಂಭವಾಗುವ ಮೊದಲು ಕೊವಿಡ್ ಪರೀಕ್ಷೆಗೆ ಒಳಗಾಗಬೇಕು ಎಂದು ಬಿರ್ಲಾ ಹೇಳಿದ್ದಾರೆ.
ಕೊವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಅಧಿವೇಶನದ ವ್ಯವಸ್ಥೆಗಳನ್ನು ಅಂತಿಮಗೊಳಿಸಲು ಲೋಕಸಭಾ ಸ್ಪೀಕರ್ ಶುಕ್ರವಾರ ಆರೋಗ್ಯ ಸಚಿವಾಲಯ, ಐಸಿಎಂಆರ್, ಏಮ್ಸ್, ಡಿಆರ್ಡಿಒ ಮತ್ತು ದೆಹಲಿ ಸರ್ಕಾರದ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದರು.