ಶಾಲಾರಂಭದ ಬಗ್ಗೆ ಮಾಹಿತಿ ಇಲ್ಲ

29/08/2020

ಬೆಂಗಳೂರು ಆ.29 : ಮಹಾಮಾರಿ ಕೊರೋನಾ ವೈರಸ್ ಎಲ್ಲರ ಮೇಲೆ ಪರಿಣಾಮ ಬೀರಿದೆ. ಆದರೆ ಶಿಕ್ಷಣ ಇಲಾಖೆಯು ಅತಿ ಹೆಚ್ಚು ಹಾನಿಗೊಳಗಾಗಿದೆ. “ಶಾಲೆಗಳನ್ನು ಯಾವಾಗ ತೆರೆಯಬೇಕು ಅಥವಾ ತರಗತಿಗಳು ತೆರೆದ ನಂತರ ಹೇಗೆ ನಡೆಯುತ್ತದೆ ಎಂಬುದು ನಮಗೆ ಇನ್ನೂ ತಿಳಿದಿಲ್ಲ” ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶುಕ್ರವಾರ ಹೇಳಿದ್ದಾರೆ.
ಪಿಎಫ್ ಮುಂಗಡ, ರಜೆ ಮತ್ತು ವರ್ಗಾವಣೆಯಂತಹ ಶಿಕ್ಷಕರ ಸಮಸ್ಯೆಗಳನ್ನು ನೀಗಿಸುವ ಶಿಕ್ಷಕ ಮಿತ್ರ ಆ?ಯಪ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸುರೇಶ್ ಕುಮಾರ್ ಅವರು, ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳನ್ನು ನಡೆಸಿರುವುದು ನಮ್ಮ ರಾಜ್ಯಕ್ಕೆ ಹೆಮ್ಮೆಯ ವಿಷಯ ಎಂದು ಮುಖ್ಯಮಂತ್ರಿ ಪುನರುಚ್ಚರಿಸಿದ್ದಾರೆ. 8.5 ಲಕ್ಷ ವಿದ್ಯಾರ್ಥಿಗಳು ಸಾಮಾಜಿಕ ದೂರವನ್ನು ಕಾಯ್ದುಕೊಂಡಿದ್ದಾರೆ ಮತ್ತು ಶೇಕಡಾ 98 ರಷ್ಟು ಹಾಜರಾತಿ ಇದೆ ಎಂದು ಸುರೇಶ್ ಕುಮಾರ್ ಹೇಳಿದರು.