ಕೊಂಕಣಿ ಶೈಲಿಯ ಪ್ರಾನ್ ಸಾರು ಮಾಡುವ ವಿಧಾನ

August 29, 2020

ಬೇಕಾಗುವ ಸಾಮಾಗ್ರಿಗಳು : ಪ್ರಾನ್ 1 ಕೆಜಿ ( ಸಿಪ್ಪೆ ಸುಲಿದು ಸ್ವಚ್ಛ ಮಾಡಿದ್ದು), ಈರುಳ್ಳಿ 3, ಟೊಮೆಟೊ 3, ಸ್ವಲ್ಪ ಕೊತ್ತಂಬರಿ ಸೊಪ್ಪು (ಕತ್ತರಿಸಿದ್ದು), ಎಣ್ಣೆ 4 ಚಮಚ, ಬೆಳ್ಳುಳ್ಳಿ 8-10 ಎಸಳು (ಇದನ್ನು ಜಜ್ಜಿ), ಅರಿಶಿಣ ಪುಡಿ 1/2 ಚಮಚ, ಖಾರದ ಪುಡಿ (ಖಾರಕ್ಕೆ ತಕ್ಕಷ್ಟು), ಟೊಮೆಟೊ, ಸ್ವಲ್ಪ ಶುಂಠಿ, ಸ್ವಲ್ಪ ಚಕ್ಕೆ, 2-3 ಲವಂಗ, ಹುಳಿ, ರುಚಿಗೆ ತಕ್ಕ ಉಪ್ಪು,

ತಯಾರಿಸುವ ವಿಧಾನ : ಪ್ರಾನ್, ಅರಿಶಿಣ ಪುಡಿ, ಖಾರದ ಪುಡಿ, ಹುಳಿ, 1 ಚಮಚ ಉಪ್ಪು ಎಲ್ಲಾ ಹಾಕಿ ಮಿಕ್ಸ್ ಮಾಡಿ ಅರ್ಧ ಗಂಟೆ ಕಾಲ ಇಡಿ.

ಈಗ ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದಾಗ ಚಕ್ಕೆ, ಲವಂಗವನ್ನು ಜಜ್ಜಿ ಹಾಕಿ 1 ನಿಮಿಷ ಹುರಿಯಿರಿ. ಅದು ಸುವಾಸನೆ ಬರುವಾಗ ಬೆಳ್ಳುಳ್ಳಿ ಹಾಗೂ ಜಜ್ಜಿದ ಶುಂಠಿ ಹಾಕಿ. ಈರುಳ್ಳಿ ಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ ( ಹುರಿಯುವಾಗ ಗ್ಯಾಸ್ ಅನ್ನು ಸಾಧಾರಣ ಉರಿಯಲ್ಲಿಡಿ).

ಈಗ ಪ್ರಾನ್ ಹಾಕಿ 5 ನಿಮಿಷ ಹುರಿಯಿರಿ. ನಂತರ ಟೊಮೆಟೊ ಹಾಕಿ, ಎಣ್ಣೆ ಮೇಲೆ ತೇಲುವಷ್ಟು ಆಗುವವರೆಗೆ ಹುರಿಯಿರಿ. ಈಗ ಉಪ್ಪು ನೋಡಿ. ಬೇಕಿದ್ದರೆ ಸ್ವಲ್ಪ ಹಾಕಿ. ನಂತರ ಕತ್ತರಿಸಿ ಕೊತ್ತಂಬರಿ ಸೊಪ್ಪು ಹಾಕಿ ಒಮ್ಮೆ ಆಡಿಸಿ, ಹುರಿಯಿಂದ ಇಳಿಸಿದರೆ ಕೊಂಕಣಿ ಶೈಲಿಯ ಪ್ರಾನ್ ಸಾರು ರೆಡಿ.

error: Content is protected !!