ಮಡಿಕೇರಿ ನಗರಸಭೆ ಪೌರಾಯುಕ್ತರನ್ನು ಅಭಿನಂದಿಸಿದ ಭಾರತೀಯ ವಿದ್ಯಾರ್ಥಿ ಸಂಘ

29/08/2020

ಮಡಿಕೇರಿ ಆ.29 : ಮಡಿಕೇರಿ ನಗರಸಭೆಯ ನೂತನ ಪೌರಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ರಾಮದಾಸ್ ಅವರನ್ನು ಭಾರತೀಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಅಭಿನಂದಿಸಿ ಅಭಿವೃದ್ಧಿ ಕಾರ್ಯಗಳಿಗೆ ಶುಭ ಕೋರಿದರು. ಈ ಸಂದರ್ಭ ಪ್ರಮುಖರಾದ ಪ್ರೇಮ್ ಕುಮಾರ್, ಶಿವಪ್ರಸಾದ್, ದಿಲೀಪ್, ಚಂದ್ರಶೇಖರ್, ರಫಿಕ್ ಸುಂಟಿಕೊಪ್ಪ, ಶಿವಕುಮಾರ್, ಸುಂದ್ರೇಶ್ ಮತ್ತಿತರರು ಹಾಜರಿದ್ದರು.