ಕೊಡಗು ಚಾರಿಟೇಬಲ್ ಗ್ರೂಪ್ ನಿಂದ ಸೀಲ್ ಡೌನ್ ಕುಟುಂಬಗಳಿಗೆ ಕಿಟ್ ವಿತರಣೆ

August 29, 2020

ಸಿದ್ದಾಪುರ : ಕೊರೊನಾ ವೈರಸ್ ಪತ್ತೆಯಾಗಿರುವ ಹೊಲಮಾಳ ಸೀಲ್ ಡೌನ್ ವ್ಯಾಪ್ತಿಯ ಕುಟುಂಬಗಳಿಗೆ ಕೊಡಗು ಚಾರಿಟೇಬಲ್ ಗ್ರೂಪ್ ವತಿಯಿಂದ ಕಿಟ್ ಗಳನ್ನು  ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜನ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಕೊಡಗು ಚಾರಿಟಬಲ್ ಗ್ರೂಪ್ ಕಳೆದ ಹಲವು ವರ್ಷಗಳಿಂದಲೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು  ಕೆಲ ದಿನಗಳ ಹಿಂದೆ  ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಸೀಲ್ ಡೌನ್ ಪ್ರದೇಶಗಳಿಗೆ  ತರಕಾರಿ ಹಾಗೂ ಆಹಾರ ಧಾನ್ಯಗಳ ಕಿಟ್ಗಳನ್ನು ವಿತರಿಸಿ ಮಾನವೀಯತೆ ಮೆರೆದಿದೆ ಎಂದರು. ಸಂಘಟನೆಗಳು ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕೆಂದರು.

ಕೊಡಗು ಚಾರಿಟಬಲ್ ಗ್ರೂಪ್‌ನ  ಪ್ರಮುಖ ಎಂ.ಎ ಜಾಫರ್ ಮಾತನಾಡಿ   ಕಳೆದ ಕೆಲವು ವರ್ಷಗಳಿಂದಲೂ ಚಾರಿಟಬಲ್ ಗ್ರೂಪ್ ಮೂಲಕ ಜಾತಿ ಮತ ಬೇಧವಿಲ್ಲದೆ ಸಮಾಜ ಸೇವೆಯೊಂದಿಗೆ  ಸಂಕಷ್ಟದಲ್ಲಿರುವ ಜನರ ಸೇವೆ ಮಾಡುತ್ತಿದೆ ಎಂದರು.  ಕೊಡಗು ಚಾರಿಟೇಬಲ್ ಗ್ರೂಪ್‌ನ ಅಧ್ಯಕ್ಷ ಎಚ್.ಎ ಮುಸ್ತಫಾ ಅವರ ನೇತೃತ್ವದಲ್ಲಿ ಕಿಟ್ ವಿತರಣೆ ಮಾಡಲಾಯಿತು. ಗ್ರಾಮ ಪಂಚಾಯಿತಿ ಸದಸ್ಯ ವಿಜು, ಸಮಾಜ ಸೇವಕ ಅಬ್ದುಲ್ ರೆಹಮಾನ್ ,ಆಶಾ ಕಾರ್ಯಕರ್ತೆ ಇಂದಿರಾ ,ಮಹಿಳಾ ಆರೋಗ್ಯ ಸಹಾಯಕಿ ಪ್ರಮೀಳಾ ,ಚಾರಿ ಟೆಬಲ್ ಗ್ರೂಪ್ ನ ಸದಸ್ಯರುಗಳಾದ ಅಬುಬಕ್ಕರ್ ಹಾಜಿ,ಪಿ.ಬಿ ಮುಸ್ತಫಾ, ಪಿ.ಎಂ ಅಶ್ರಫ್, ನಶೀರ್, ಅಕ್ಬರ್, ನೌಷಾದ್, ರಾಶದ್  .ಅಶ್ರಫ್, ಕೋಯಾ ಸೇರಿದಂತೆ ಮತ್ತಿತರರು ಇದ್ದರು

error: Content is protected !!