ಎ.ಕೆ.ಸುಬ್ಬಯ್ಯ – ಪೊನ್ನಮ್ಮದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್ ವತಿಯಿಂದ ಮಾಲ್ದಾರೆ ವ್ಯಾಪ್ತಿಯ ಹಾಡಿಗಳಲ್ಲಿ ದಿನಸಿ ಕಿಟ್ ವಿತರಣೆ

29/08/2020

ಸಿದ್ದಾಪುರ ಆ.29 : ಎ.ಕೆ ಸುಬ್ಬಯ್ಯ-ಪೊನ್ನಮ್ಮದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್ ವತಿಯಿಂದ ದಿವಂಗತ ಎ.ಕೆ. ಸುಬ್ಬಯ್ಯಅವರ ಮೊದಲ ವರ್ಷದ ಸ್ಮರಣಾ ದಿನದ ಅಂಗವಾಗಿ ವಿರಾಜಪೇಟೆತಾಲ್ಲೂಕಿನ ಮಾಲ್ದಾರೆಗ್ರಾಮ ವ್ಯಾಪ್ತಿಯ ಹಾಡಿಗಳ ನೂರಾರು ಫಲಾನುಭವಿಗಳಿಗೆ ದಿನಸಿ ಕಿಟ್ಟು ಗಳನ್ನು ವಿತರಿಸಲಾಯಿತು.
ತಟ್ಟಳ್ಳಿ ಹಾಡಿಯಲ್ಲಿ ನಡೆದಕಿಟ್ ವಿತರಣಾಕಾರ್ಯಕ್ರಮದಲ್ಲಿ
ಟ್ರಸ್ಟಿನ ವ್ಯವಸ್ಥಾಪಕ, ಕೆಪಿಸಿಸಿ ಕಾನೂನು ಘಟಕದಅಧ್ಯಕ್ಷಎ.ಎಸ್. ಪೆÇನ್ನಣ್ಣಅವರು ದಿನಸಿ ಕಿಟ್ ವಿತರಣೆ ಮಾಡಿದರು. ಬಳಿಕ ಮಾತನಾಡಿದಅವರುಕೋವಿಡ್ ಸಂಕಷ್ಟಕಾಲದಲ್ಲಿ ತೊಂದರೆ ಅನುಭವಿಸಿದ ಜನತೆಗೆ ನೆರವು ನೀಡುವಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಒಂದು ತಿಂಗಳಿಗೆ ಬೇಕಾದಆಹಾರ ಪದಾರ್ಥಗಳ ಕಿಟ್ಗಳನ್ನು ವಿರಾಜಪೇಟೆತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಸಂಕಷ್ಟದಲ್ಲಿರುವ ಸಾವಿರಾರು ಕುಟುಂಬಗಳ ಫಲಾನುಭವಿಗಳಿಗೆ ಕಿಟ್ ವಿತರಿಸಲಾಗಿದ್ದು ಮುಂದಿನ ದಿನಗಳಲ್ಲೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಟ್ರಸ್ಟ್ ಮುಂದಾಗಲಿದೆಎಂದರು.
ವಿರಾಜಪೇಟೆ ಬ್ಲಾಕ್‍ಕಾಂಗ್ರೆಸ್‍ಅಧ್ಯಕ್ಷ ಪಟ್ಟಡರಂಜಿ ಪೂಣಚ್ಚ ಮಾತನಾಡಿ, ದಿವಂಗತ ಎ.ಕೆ ಸುಬ್ಬಯ್ಯನವರರಾಜಕೀಯ ನಿಲುವು, ಶೋಷಿತ ಸಮುದಾಯಗಳ ಕುರಿತುಅವರು ಹೊಂದಿದ್ದ ಕಾಳಜಿಯ ಬಗ್ಗೆ ಮಾತನಾಡಿದರಲ್ಲದೆ, ಕೊಡಗಿನ ಸಮಸ್ಯೆಗಳ ಬಗ್ಗೆ ಅವರ ನಿರಂತರ ಹೋರಾಟವನ್ನು ಮೆಲುಕುಹಾಕಿದರು.
ಯಾವುದೇ ಸಮಸ್ಯೆಗಳಿದ್ದಲ್ಲಿ ಎಲ್ಲ ಬಾಂಧವರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ದಿಡ್ಡಳ್ಳಿ ಆದಿವಾಸಿಗಳಿಗೆ ಹೋರಾಟದ ಮೂಲಕ ಶಾಶ್ವತ ಸೂರುಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎ.ಕೆ ಸುಬ್ಬಯ್ಯನವರುಜಿಲ್ಲೆಯ ಹಲವು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಎ .ಎಸ್ ಪೊನ್ನಣ್ಣ ಅವರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ನಾವೆಲ್ಲರೂ ಹೆಚ್ಚಿನ ಸಹಕಾರ ನೀಡಬೇಕಾಗಿದೆ ಎಂದರು.
ಈ ಸಂದರ್ಭ ಮಾಲ್ದಾರೆ ಬ್ಲಾಕ್‍ಕಾಂಗ್ರೆಸ್‍ಅಧ್ಯಕ್ಷ ಜಿ ಥೋಮಸ್ ,
ವಿರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಮೊಹಮ್ಮದ್‍ರಾಫಿ , ಡಿ.ಪಿ.ರಾಜೇಶ್ ಪದ್ಮನಾಭ, ಟ್ರಸ್ಟಿ ಎ.ಎಸ್. ನರೇನ್‍ಕಾರ್ಯಪ್ಪ,ತಾಲ್ಲೂಕು ಪಂಚಾಯಿತಿ ಸದಸ್ಯರಾದ ಚಿನ್ನಮ್ಮ, ಕಾವೇರಮ್ಮ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಸಿ.ಎ.ಹಂಸ , ವಕೀಲ ನರೇಂದ್ರಕಾಮತ್, ಸೋನಿಯಾಗಾಂಧಿ ಬ್ರಿಗೇಡ್‍ ಜಿಲ್ಲಾಧ್ಯಕ್ಷ ಜಾನ್ಸನ್ , ಪ್ರಮುಖರಾದ ಲೋಹಿತ್ , ಕೇಶವ ಕಾಮತ್ , ಬ್ಲಾಕ್‍ ಯುವ ಕಾಂಗ್ರೆಸ್‍ ಉಪಾಧ್ಯಕ್ಷ ಸಮೀರ್ ಕಿಸಾನ್‍ ಘಟಕದ ಮಹಮ್ಮದ್ ಅಲಿ,ಉಮೇಶ್, ಲಲಿತ. ಹಾಡಿ ಮುಖಂಡ ಶಂಕರ್ ಸೇರಿದಂತೆ ಮತ್ತಿತರರು ಇದ್ದರು